ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಚಲನ ಚಿತ್ರ ನಟರಾದ ಸಿಹಿಕಹಿ ಚಂದ್ರು ಬೆಟ್ಟಿ
Date : 06-08-2025
ದಿನಾಂಕ:-06.08.2025 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆೆ ಸ್ಟಾರ್ ಸುವರ್ಣಾ ವಾಹಿನಿಯಲ್ಲಿ ಪ್ರಸಾರವಾಗುವ ಬೊಂಬಾಟ ಬೋಜನ ಕಾರ್ಯಕ್ರಮವನ್ನು ನಡೆಸಿಕೊಡುವ ಹಾಗೂ ಕನ್ನಡ ಚಲನ ಚಿತ್ರ ನಟರಾದ ಶ್ರೀ ಸಿಹಿಕಹಿ ಚಂದ್ರು ಇವರು ಶ್ರೀಮಠಕ್ಕೆ ಬೆಟ್ಟಿ ಕೊಟ್ಟು ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಸಿಎ. ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.