ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಅನೀಲ ಶಾಸ್ತಿç ಭೆಟ್ಟಿ
Date : 16-08-2026
ದಿನಾಂಕ:-16.08.2026 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸ್ವಾತಂತ್ರö್ಯ ಹೋರಟಗಾರರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ದಿ|| ಲಾಲ್ಬಹದ್ದೂರು ಶಾಸ್ತಿç ಇವರ ಮಗನಾದ ಸನ್ಮಾನ್ಯ ಶ್ರೀ ಅನೀಲ ಶಾಸ್ತಿç ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ವೈಸ್-ಚೇರ್ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಮತ್ತು ಶ್ರೀಮಠದ ಸಿಬ್ಬಂದಿವರ್ಗದವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.