ಶ್ರೀ ಸಿದ್ಧಾರೂಢಸ್ವಾಮಿ ಮಠಕ್ಕೆ ಕೆ.ಜೆ.ಪಿ. ಜ್ಯುವೆಲರ್ ವತಿಯಿಂದ ರೂಮ್ ಕಟ್ಟಡದ ಭೂಮಿ ಪೂಜೆ .
Date : 07-10-2025
ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಒಂದು ಕೊಠಡಿಯನ್ನು ಕಟ್ಟಿಸಲಿಕ್ಕೆ ಕೆ.ಜೆ.ಪಿ. ಜ್ಯೂವೆಲರ್ ಮಾಲಕರಾದ ಸನ್ಮಾನ್ಯ ಡಾ|| ಗಣೇಶ ಶೇಟ್ ಇವರು ದೇಣಿಗೆಯಾಗಿ ಕಟ್ಟಿಸಿಕೊಡುತ್ತೇನೆ ಅಂತ ವಾಗ್ದಾನ ಮಾಡಿದ ಪ್ರಕಾರ ದಿನಾಂಕ:-07.10.2025 ರಂದು ಸದರ ಕೊಠಡಿಯನ್ನು ಕಟ್ಟುವುದರ ಭೂಮಿ ಪೂಜೆಯನ್ನು ತಮ್ಮ ಪರಿವಾರ ಸಮೇತರಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಯುತರನ್ನು ಶ್ರೀಮಠದಿಂದ ಶಾಲು ಹೊದಿಸಿ ಸನ್ಮಾನಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಾಳು ಟಿ. ಮಗಜಿಕೊಂಡಿ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು