Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀ ಮಠದ ದಾಸೋಹದಲ್ಲಿ ಉಪಯೋಗಿಸಲಿಕ್ಕೆ ಸ್ಟೇನ್‌ಲೆಸ್ ಸ್ಟೀಲ್ ದೊಡ್ಡ ಕುಕ್ಕರಗಳು ಹಾಗೂ ಬೇಬಿ ಬಾಯಲರ ದೇಣಿಗೆ.
Date : 01-10-2025
ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಅಡುಗೆ ತಯಾರಿಸಲಿಕ್ಕೆ ಕೆನರಾ ಬ್ಯಾಂಕ್, ಹುಬ್ಬಳ್ಳಿ ಶಾಖೆಯಿಂದ ತಮ್ಮ ಸಿ.ಎಸ್.ಆರ್. ಯೋಜನೆ ಅಡಿಯಲ್ಲಿ ರೂ. 8,25,000.00 ಗಳ ಮೌಲ್ಯದ ಸ್ಟೇನ್‌ಲೆಸ್ ಸ್ಟೀಲಿನ ಎರಡು ದೊಡ್ಡ ಕುಕ್ಕರಗಳು ಹಾಗೂ ಬೇಬಿ ಬಾಯಲರ್‌ನ್ನು ದೇಣಿಗೆಯಾಗಿ ದಿನಾಂಕ:-01.10.2025 ರಂದು ಶ್ರೀಮಠಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಶ್ರೀ ವೀರೇಂದ್ರಬಾಬು ಕೆ. ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶ್ರೀ ಸುಚೇಂದ್ರಕುಮಾರ ವಿಮಲ್, ಹಾಗೂ ಡಿವ್ಹಿಜನಲ್ ಮ್ಯಾನೇಜರ್ ಶ್ರೀ ಸಂಜೀವಕುಮಾರ ದೊಮ ಇವರುಗಳಿಗೆ ಶ್ರೀಮಠದಿಂದ ಶಾಲು ಹೊದಿಸಿ ಸನ್ಮಾನಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಡಾ|| ಗೋವಿಂದ ಗು. ಮಣ್ಣೂರ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.