Shri Siddharoodha Swamiji Math Trust Committee

Hubballi

www.srisiddharoodhaswamiji.in

ದೇವಿಪುರಾಣ ಪಠಣೆ ಕಾರ್ಯಕ್ರಮ
Date : 02-10-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದಿನಾಂಕ:-22.09.2025 ರಿಂದ 02.10.2025 ರವರೆಗೆ ಪ್ರತಿ ನಿತ್ಯ ಮಧ್ಯಾಹ್ನ 03-00 ರಿಂದ ಸಾಯಂಕಾಲ 05-00 ಘಂಟೆಯವರೆಗೆ ದೇವಿಪುರಾಣ ಪಠಣೆ ಕಾರ್ಯಕ್ರಮ ನಡೆಯಿತು. ಶ್ರೀ ಗುರುವೀರಭದ್ರ ಸ್ವಾಮಿಗಳು, ಸಿದ್ಧಾಶ್ರಮ, ಕಗದಾಳ ಇವರು ಪುರಾಣ ಪಠಣವನ್ನು ವಿವರಣಾತ್ಮಕವಾಗಿ ನಡೆಸಿದರು, ಶ್ರೀ ಗುರುಶಾಂತಪ್ಪ ಕಾರಿ ಇವರು ಪುರಾಣವನ್ನು ಓದಿದರು, ಶ್ರೀ ಸದಾನಂದ ಬೆಂಡಿಗೇರಿ ಇವರು ಸಂಗೀತ ಸೇವೆ ಹಾಗೂ ಶ್ರೀ ಮೌನೇಶ ಬಡಿಗೇರ ಮತ್ತು ಶ್ರೀ ಮಂಜು ಹುಂಬಿ ಇವರು ತಬಲಾ ಸೇವೆಯನ್ನು ನೆರವೇರಿಸಿದರು. ದಿನಾಂಕ: ೦೨-೧೦-೨೦೨೫ ರಂದು ವಿಜಯದಶಮಿ ಪೂಜೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಸದರ ದೇವಿ ಪುರಾಣ ಕಾರ್ಯಮವನ್ನು ನಡೆಸಿಕೊಟ್ಟ ಸಾಧಕರನ್ನು ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು