ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ವತಿಯಿಂದ ಪತ್ರಿಕಾ ಮಾಧ್ಯಮದವರಿಗೆ ಗೌರವ ಸಮರ್ಪಣೆ.
Date : 28-09-2025
ಶ್ರೀಮಠದಲ್ಲಿ ನಡೆಯುವ ಸೇವಾ ಕಾರ್ಯಗಳಲ್ಲಿ ವರ್ಷವಿಡಿ ಸೇವೆ ಸಲ್ಲಿಸಿದ ಪತ್ರಿಕಾ ಪ್ರತಿನಿಧಿಗಳಿಗೆ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ದಿನಾಂಕ: 28.09.2025 ರಂದು ಮಧ್ಯಾಹ್ನ :- 01-00 ಘಂಟೆಗೆ ಗೌರವ ಸಮರ್ಪಣೆಯನ್ನು ಶ್ರೀಮಠದ ಕೈಲಾಸ ಮಂಟಪದಲ್ಲಿ ನೆರವೇರಿತು. ಪತ್ರಿಕಾ ಪ್ರತಿನಿಧಿಗಳಾದ ಶ್ರೀ ಲೋಚನೇಶ ಹೂಗಾರ, ಶ್ರೀ ವಿರುಪಾಕ್ಷ ಗುದ್ದಯ್ಯನವರ, ಶ್ರೀ ಗಣಪತಿ ಗಂಗೊಳ್ಳಿ, ಶ್ರೀ ಬಿ.ಎನ್.ನಾಗರಾಜ, ಶ್ರೀ ಗಣೇಶ ಬಿಜ್ಜರಗಿ, ಶ್ರೀ ಮಾಲತೇಶ ಹೂಲಿಹಾಳ, ಶ್ರೀ ಗೋವಿಂದರಾಜ ಜವಳಿ, ಶ್ರೀ ಪ್ರಶಾಂತ ಹಿರೇಮಠ, ಶ್ರೀ ಗುರುರಾಜ ಹೂಗಾರ, ಶ್ರೀ ಪ್ರಶಾಂತ ರಾಜಗುರು ಇವರುಗಳು ಗೌರವ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.