Shri Siddharoodha Swamiji Math Trust Committee

Hubballi

www.srisiddharoodhaswamiji.in

ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ರಥ ಯಾತ್ರೆಯ ಉದ್ಘಾಟನೆ.

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ಯ ಆರೂಢ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಂಡಿದ್ದು ಸದರ ಜ್ಯೋತಿ ಯಾತ್ರೆಯ ಉದ್ಘಾನೆಯನ್ನು ದಿನಾಂಕ:-23.12.2024 ರಂದು ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ ಜಿಲ್ಲೆಯ ಚಳಕಾಪೂರದಲ್ಲಿ ಅತ್ಯಂತ ವೈಭವದಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೋ.ಬ್ರ. ಸದ್ಗುರು ಡಾ|| ಶಿವಕುಮಾರ ಮಹಾಸ್ವಾಮಿಗಳು, ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರ ಹಾಗೂ ಚಳಕಾಪುರ ಇವರು ವಹಿಸಿದ್ದರು, ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಪ್ರಣವಾನಂದ ಮಹಾಸ್ವಾಮಿಗಳು, ಶ್ರೀನಾಗಭೂಷಣ ಶಿವಯೋಗಿ ಮಠ, ಮುಚಳಂಬ ಇವರು ವಹಿಸಿದ್ದರು, ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ಕೆ. ನಟರಾಜನ್, ಗೌರವಾನ್ವಿತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರು ನೆರವೇರಿಸಿ ಮಾತನಾಡುತ್ತಾ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು ಜಾತಿ, ಮತ, ಪಂಥ ಎನ್ನದೇ ಎಲ್ಲರನ್ನೂ ತಮ್ಮವರೆಂದು ಅಪ್ಪಿಕೊಂಡಿದ್ದರು. ಹೀಗಾಗಿ ಅವರು ಸರ್ವಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಅಂತ ನುಡಿದರು. ಅಧ್ಯಕ್ಷತೆಯನ್ನು ಸನ್ಮಾನ್ಯ ರುದ್ರಪ್ಪ ಲಮಾಣಿ, ಉಪಸಭಾಪತಿಗಳು, ಕರ್ನಾಟಕ ವಿಧಾನ ಸಭೆ ಬೆಂಗಳೂರು ಇವರು ಶ್ರೀಮಠದ ಕ್ಯಾಲೆಂಡರ್ ಹಾಗೂ ಡೈರಿಗಳನ್ನು ಬಿಡುಗಡೆ ಮಾಡಿದರು. ಸಮ್ಮುಖ ಸ್ಥಾನದಲ್ಲಿ ಮಾತೋಶ್ರೀ ಲಕ್ಷ್ಮಿ ತಾಯಿಯವರು, ಸಿದ್ಧಾರೂಢ ಮಠ, ಗುಲ್ಬುರ್ಗಾ, ಪರಮ ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಚಳಕಾಪುರ. ಪರಮ ಪೂಜ್ಯ ಶ್ರೀ ಗಣೇಶಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಬೀದರ, ಪರಮ ಪೂಜ್ಯ ಶ್ರೀ ಪರಮಾನಂದ ಮಹಾಸ್ವಾಮಿಗಳು, ಸಿದ್ಧಾರೂಢ ಮಠ, ಯಳಸಂಗಿ, ಪರಮ ಪೂಜ್ಯ ಶ್ರೀ ಸದ್ರೂಪಾನಂದ ಮಹಾಸ್ವಾಮಿಗಳು, ಮಳಚಾಪೂರ, ಮಾತೋಶ್ರೀ ಅಮೃತಾನಂದಮಯಿ ತಾಯಿಯವರು, ಶ್ರೀ ಸಿದ್ಧಾರೂಢ ಮಠ, ಬೆಳ್ಳೂರ, ಪರಮ ಪೂಜ್ಯ ಶ್ರೀ ನಾಗಯ್ಯ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಬ್ಯಾಲಳ್ಳಿ ಇವರುಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಡಿ.ಆರ್.ಪಾಟೀಲ, ಅಧ್ಯಕ್ಷರು, ಮೇಲ್ಮನೆ ಸಭಾ, ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಅಂದಾನಪ್ಪ ಚ. ಚಾಕಲಬ್ಬಿ, ಶ್ರೀ ವಸಂತ ಯ. ಸಾಲಗಟ್ಟಿ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಭಕ್ತವೃಂದದವರು ಉಪಸ್ಥಿತರಿದ್ದರು.

ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ರಥ ಯಾತ್ರೆ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ಯ ಆರೂಢ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಜ್ಯೋತಿ ಯಾತ್ರೆಯು ದಿನಾಂಕ:-23.12.2024 ರಂದು ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಚಳಕಾಪೂರ ಬೀದರ ಜಿಲ್ಲೆಯಿಂದ ಹೊರಟು ಕರ್ನಾಟಕ, ಆಂದ್ರ, ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಹಾಗೂ ವಿವಿಧ ಸ್ಥಳಗಳಲ್ಲಿ ಸಂಚರಿಸಿ ದಿನಾಂಕ:-18.02.2025 ರಂದು ಶ್ರೀ ಸಿದ್ಧಾರೂಢ ಮಠ ಹುಬ್ಬಳ್ಳಿಗೆ ಬಂದು ತಲುಪಲಿದೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸುವ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢರ ತತ್ವಗಳ ಭಜನೆ ಹಾಗೂ ಪ್ರವಚನಗಳ ಮೂಲಕ ಜ್ಞಾನದ ಪ್ರಸಾರ ಮತ್ತು ವಿಶ್ವಶಾಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಾಡುತ್ತಿರುವುದು.

ಲಕ್ಷದೀಪೋತ್ಸವ ಕಾರ್ಯಕ್ರಮ

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ: 01.12.2024 ರಂದು ಸಾಯಂಕಾಲ 6-೦೦ ಘಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮವು ಭಕ್ತರ ಸಹಯೋಗದೊಂದಿಗೆ ಅತೀ ವಿಜೃಂಭಣೆಯಿAದ ಜರುಗಿತು.

2024 ನೇ ವರ್ಷದ ಶ್ರಾವಣ ಜಲರಥೋತ್ಸವ

ಶ್ರಾವಣ ಮಹೋತ್ಸವವು ಶ್ರೀ ಶಾಲಿವಾಹನ ಶಕೆ 1946 ಕ್ರೋಧಿನಾಮ ಸಂವತ್ಸರದ ಶ್ರಾವಣ ಶುದ್ಧ ದಶಮಿ ದಿನಾಂಕ:-14.08.2024 ರಂದು ಪ್ರಾತ:ಕಾಲಕ್ಕೆ ಶ್ರೀ ಸಿದ್ಧಾರೂಢಸ್ವಾಮಿಗಳವರ ಸಮಾಧಿಗೆ ರುದ್ರಾಭಿಷೇಕ ನೆರವೇರಿದ ನಂತರ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಯಿತು. ಪ್ರತಿನಿತ್ಯ ಮುಂಜಾನೆ ಶ್ರೀಮಠದ ಕೈಲಾಸ ಮಂಟಪದಲ್ಲಿ 7-45 ಘಂಟೆಗೆ ಶ್ರೀ ಸಿದ್ಧಾರೂಢಸ್ವಾಮಿಯವರ ಪುರಾಣ ಪಠಣ ಹಾಗೂ 09-30 ಘಂಟೆಗೆ ಪೂಜ್ಯ ಮಹಾತ್ಮರಿಂದ ಶಾಸ್ತ ಪ್ರವಚನ ಮತ್ತು ಸಾಯಂಕಾಲ 5-೦೦ ಘಂಟೆಗೆ ಕೀರ್ತನೆ ನಡೆದು ನಂತರ ಮಹಾಪೂಜೆ ನೆರವೇರಿಸಲಾಯಿತು. ಶ್ರಾವಣ ವದ್ಯ ಪ್ರತಿಪದ ಅಂದರೆ ದಿನಾಂಕ: 20.08.2024, ಮಂಗಳವಾರ ದಿವಸ ಶ್ರೀ ಸಿದ್ಧಾರೂಢ ಸ್ವಾಮಿಯವರ 95 ನೇ ವರ್ಷದ ಪುಣ್ಯತಿಥಿಯ ದಿವಸ ಪಲ್ಲಕ್ಕಿ ಉತ್ಸವವು ವಾದ್ಯ ವೈಭವದೊಂದಿಗೆ ಶಹರದೊಳಗೆ ಹೋಗಿ ಮರಳಿ ಶ್ರೀಮಠಕ್ಕೆ ಬಂದು ಸಾಯಂಕಾಲ: 5-30 ಘಂಟೆಗೆ ಜಲರಥೋತ್ಸವ (ತೆಪ್ಪದ ತೇರು) ಅತ್ಯಂತ ವಿಜೃಂಭಣೆಯಿ0ದ ಜರುಗಿತು, ನಂತರ ಮಹಾಪೂಜೆಯೊಂದಿಗೆ ಉತ್ಸವವು ಸಮಾಪ್ತಿಯಾಯಿತು.

ಶ್ರಾವಣ ಜಲರಥೋತ್ಸವ ಆಮಂತ್ರಣ.

15 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”ದ ಸಮಾರೋಪ ಸಮಾರಂಭ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ: 07.07.2024 ರಿಂದ 02.08.2024 ರವರೆಗೆ ನಡೆದ ಭಗವಚ್ಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಆಶೀರ್ವಚನವನ್ನು ನೀಡಿದರು, ಹುಬ್ಬಳ್ಳಿಯ ಶ್ರೀಮಠದಲ್ಲಿ ಸತತವಾಗಿ ಹದಿನಾರು ವರ್ಷಗಳ ಪರಿಯಂತರವಾಗಿ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿಕೊಂಡು ಬಂದಿದ್ದು ಅತ್ಯಂತ ಶ್ಲಾö್ಯಘನೀಯವಾದ ವಿಷಯವಾಗಿದೆ, ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ, ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತೀ ವಿರಳ, ಇಂತಹದರಲ್ಲಿ ಶ್ರೀಮಠದಿಂದ ಹದಿನಾರು ವರ್ಷಗಳವರೆಗೆ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ, ಪಾರಮಾರ್ಥಗೀತೆ, ಸಿದ್ಧಾರೂಢರ ಚರಿತ್ರೆ ಹಾಗೂ ಶ್ರೀಮನ್ ನಿಜಗುಣ ಸ್ವಾಮಿಗಳ ಶಾಸ್ತç ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟ ಶ್ರೀಮಠದ ಎಲ್ಲಾ ಧರ್ಮದರ್ಶಿಗಳಿಗೆ ಸಿದ್ಧಾರೂಢರ ಕೃಪಾಶೀರ್ವಾದ ಇರಲೆಂದು ಹೃದಯ ತುಂಬಿ ಹಾರೈಸಿದರು. ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ರನ್ನತಿಮ್ಮಾಪೂರ ಹಾಗೂ ಸಮ್ಮುಖ ಸ್ಥಾನವನ್ನು ಶ್ರೋ.ಬ್ರ. ಸದ್ಗುರು ಯೋಗಿರಾಜ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಹಾಗೂ ಮಾತೋಶ್ರೀ ಶಶಿಕಲಾ ಮಾತಾ ಇವರುಗಳು ವಹಿಸಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣ ಶೆಟ್ಟರ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಎಲ್ಲ ಪೂಜ್ಯರನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಸರ್ವವರನ್ನು ವಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ರಮೇಶ ಎಸ್. ಬೆಳಗಾವಿ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಗುರುಪೂರ್ಣಿಮೆ ಆಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಇದೇ ದಿನಾಂಕ: 21.07.2024 ರಂದು ಗುರುಪೂರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ 6-೦೦ ಘಂಟೆಗೆ ಕಾಕಡಾರತಿ ಪೂಜೆ, 12-3೦ ಘಂಟೆಗೆ ಅನ್ನ ಸಂತರ್ಪಣೆ, ಮುಂಜಾನೆ:-೦7-೦೦ ರಿಂದ 12-3೦ ರ ವರೆಗೆ ಅಭಿಷೇಕ, ಸಾಯಂಕಾಲ : ೦7-೦೦ ಘಂಟೆಗೆ ಶ್ರೀಗಳವರ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಿತು, ಗುರುವಂದನಾ ಸಮಾರಂಭದ ಸಾನಿಧ್ಯವನ್ನು ಪರಮಪೂಜ್ಯಶ್ರೀ ಸಹಜಾನಂದ ಸ್ವಾಮಿಗಳು ಪೀಠಾಧ್ಯಕ್ಷರು ಸಿದ್ಧಾರೂಢ ದರ್ಶನಪೀಠ, ಚಿಕ್ಕನಂದಿ ಹಾಗೂ ಮಹಾಲಿಂಗಪೂರ ಇವರು ವಹಿಸಿದ್ದರು. ನೇತೃತ್ವವನ್ನು ಪರಮ ಪೂಜ್ಯ ಶ್ರೀ ಬಸವರಾಜ ಸ್ವಾಮಿಗಳು, ಶಿವಾನಂದ ಮಠ, ರನ್ನ ಬೆಳಗಲಿ ಇವರು ವಹಿಸಿದ್ದರು. ಪರಮ ಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ, ಪರಮ ಪೂಜ್ಯ ಶ್ರೀ ಪರಿಪೂರ್ಣಾನಂದ ಸ್ವಾಮಿಗಳು, ಬೆಳಹೊಡ, ಪರಮ ಪೂಜ್ಯ ಶ್ರೀ ಆತ್ಮಾನಂದ ಸ್ವಾಮಿಗಳು, ಗೋಕಾಕ, ಪರಮ ಪೂಜ್ಯ ಶ್ರೀ ಶಾಂತಾನAದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರುಗಳು ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಚೇರಮನ್ನರು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಇವರು ವಹಿಸಿದ್ದರು. ಪೂಜ್ಯ ಮಹಾತ್ಮರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಡಾ|| ಗೋವಿಂದ ಜಿ. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕೋಟಿ ಬಿಲ್ವಾರ್ಚನೆ & 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಿನಾಂಕ:-07.07.2024 ರಿಂದ 15.09.2024 ರವರೆಗೆ ನಡೆಯುವ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ ಹಾಗೂ ದಿನಾಂಕ: 07.07.2024 ರಿಂದ 03.08.2024 ರವರೆಗೆ ನಡೆಯುವ 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಗೋಕಾಕದ ಶ್ರೀ ಶಾಮಾನಂದ ಆಶ್ರಮದ ಸದ್ಗುರು ಶ್ರೀ ಅತ್ಯಾನಂದ ಮಹಾಸ್ವಾಮಿಗಳು, ಪಾವನ ಸಾನಿದ್ಯವನ್ನು ವಹಿಸಿದ್ದ ಸಹಜಯೋಗಿ ಶ್ರೋ.ಬ್ರ.ಸದ್ಗುರು ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ, ಸಾನಿದ್ಯ ವಹಿಸಿದ ಅಣ್ಣಿಗೇರಿ ದಾಸೋಹ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಮ್ಮುಖ ಸ್ಥಾನವನ್ನು ಪರಮ ಪೂಜ್ಯ ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ ರನ್ನತಿಮ್ಮಾಪೂರ, ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಗೋಕಾಕ, ಪರಮಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಇವರುಗಳು ವಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ವಹಿಸಿದ್ದರು, ಭಗವಚ್ಚಿಂತನ ಸಾಧನ ಶಿಬಿರದ ಸಂಚಾಲಕರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಕೋಟಿ ಬಿಲ್ವಾರ್ಚನೆಯ ಅದ್ಯಕ್ಷರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಉಪಸ್ಥಿತ ವಹಿಸಿದ್ದರು, ಪ್ರಾರ್ಥನೆಯನ್ನು ಶ್ರೀ ಮಲ್ಲನಗೌಡ ಶೆಗುಣಸಿ, ಸಾ|| ಗೋಕಾಕ ಇವರು ನೆರವೇರಿಸಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಬಾಳು ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ನೂರಾರು ಜನ ಸಾಧಕರು ಮತ್ತು ಪೂಜಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಮತ್ತು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ, ನವದೆಹಲಿ ಇವರ ಸಹಯೋಗದಲಿಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮವು ದಿನಾಂಕ:-01.07.2024 ರಿಂದ 15.09.2024 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮುಂಜಾನೆ:-09-00 ಘಂಟೆಗೆ ಪ್ರಾರಂಭ.

ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ 16 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”

ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ 16 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ” ರವಿವಾರ ದಿನಾಂಕ: 07-07-2024 ರಿಂದ ಶನಿವಾರ ದಿನಾಂಕ: -03.08-2024 ರವರೆಗೆ ಸ್ಥಳ: ಶ್ರೀಮಠದ ಆವರಣ

ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ, ಇವರಿಗೆ ಆತ್ಮೀಯ ಅಭಿನಂದನಾ ಸಮಾರಂಭ.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-26.06.2024 ರಂದು ಮುಂಜಾನೆ 11-30 ಕ್ಕೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಮೇಡಮ್ ಇವರನ್ನು ಶ್ರೀಮಠದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿ.ವಿ.ಮಲ್ಲಾಪುರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ ಇವರುಗಳು ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ನೆರವೇರಿಸಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕರ್ನಾಟಕಕ್ಕೆ 50 ರ ಸಂಭ್ರಮದ ಹಿನ್ನೆಲೆಯಲ್ಲಿ "ಜ್ಯೋತಿ ರಥಯಾತ್ರೆ"

ಕರ್ನಾಟಕಕ್ಕೆ 50 ರ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಸುವರ್ಣ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲು ಯೋಜನೆ ರೂಪಿಸಲಾಗಿದೆ. ಕನ್ನಡ ನಾಡು, ನುಡಿ, ಪರಂಪರೆ ಸಂಸ್ಕೃತಿಯ ಹಿರಿಮೆಯನ್ನು ಬಿಂಬಿಸುವ ಕಾರ್ಯಕ್ರಮಗಳು ನಡೆಯಲಿವೆ. ಇಂದು ಎಲ್ಲೆಡೆ ಕರ್ನಾಟಕ ರಾಜ್ಯೋತ್ಸವ ಆಚರಣೆಯಾಗುತ್ತಿದೆ. ರಾಜ್ಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಯು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀಮಠದ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕನ್ನಡ ಸಂಸ್ಕೃತಿಯ ಇಲಾಖೆಯ ಅಧಿಕಾರಿಗಳು, ಕನ್ನಡ ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು.

ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಇವರಿಂದ ಶ್ರೀಮಠದಲ್ಲಿ ವಿವಿಧ ಕಟ್ಟಡ ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನಾ ಸಮಾರಂಭ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-10.05.2024 ರಂದು ಶ್ರೀ ಸಿದ್ಧಾರೂಢ ಗೋಸೇವಾ ಕೇಂದ್ರ ಅಡಿಗಲ್ಲು ಮತ್ತು ಶ್ರೀ ಸಿದ್ಧಾರೂಢ ಅದ್ವೆತ ವೇದಾಂತ ಗ್ರಂಥಾಲಯ, ಶ್ರೀ ಸಿದ್ಧಾರೂಢ ವಸತಿ ಗೃಹ (ಡಾರಮೇಟರಿ), ಶ್ರೀ ಸಿದ್ಧಾರೂಢ ಗೋಸೇವಾ ಕೇಂದ್ರದ ಸಿಬ್ಬಂದಿಗಳ ವಸತಿ ಕೊಠಡಿ ಹಾಗೂ ಶ್ರೀ ಸಿದ್ಧಾರೂಢ ಭಕ್ತ ನಿಲಯ ಒಂದನೇ ಮಹಡಿಯ ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಾಯಿತು, ಉದ್ಘಾಟಕರಾಗಿ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು, ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ. ಜಿಲ್ಲಾ ಧಾರವಾಡ ಇವರು ನೆರವೇರಿಸಿದರು, ಸನ್ಮಾನ್ಯ ಶ್ರೀ ಸಂಜಯ್ ಗುಡಗುಡಿ, ಪ್ರಧಾನ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ಧಾರವಾಡ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ವಿನಾಯಕ ಅ. ಘೋಡ್ಕೆ, ಮತ್ತು ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಹಾಗೂ ಶ್ರೀಮಠದ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು.

ಕೇಂದ್ರದ ಯುಪಿಎಸ್‌ಸಿಯಲ್ಲಿ ರ‍್ಯಾಂಕ್ ಪಡೆದ ಕುಮಾರಿ ವಿಜೇತಾ ಭೀ. ಹೊಸಮನಿ ಇವರಿಗೆ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಇವರಿಂದ ಸನ್ಮಾನ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-30-04.2024 ರಂದು ಕುಮಾರಿ ವಿಜೇತಾ ಭೀಮಸೇನ ಹೊಸಮನಿ ಇವರು ಕಾನೂನು ಪದವಿದರೆಯಾಗಿದ್ದು 2023 ನೇ ಸಾಲಿನ ಕೇಂದ್ರದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 100 ನೇ ರ‍್ಯಾಂಕ್ ಪಡೆದುಕೊಂಡು ಜಿಲ್ಲೆಗೆ ಖ್ಯಾತಿಯನ್ನು ತಂದುಕೊಟ್ಟಿದ್ದಕ್ಕಾಗಿ ಶ್ರೀಮಠದ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಇವರು ಶ್ರೀಮಠದ ವತಿಯಿಂದÀ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀ ವಿನಾಯಕ ಅ. ಘೋಡ್ಕೆ, ಡಾ|| ಗೋವಿಂದ ಗು. ಮಣ್ಣೂರ ಮತ್ತು ಇವರ ಪಾಲಕರಾದ ಶ್ರೀ ಭೀಮಸೇನ ಹೊಸಮನಿ, ಶ್ರೀಮತಿ ಶಶಿಕಲಾ ಹೊಸಮನಿ, ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ತುಪ್ಪದ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 21.04.2024 ರಂದು ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆಯನ್ನು ಧರ್ಮದರ್ಶಿಗಳಾದ ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ ಇವರು ವಹಿಸಿಕೊಂಡು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚೇರ್‌ಮನ್ನರಾಗಿ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ಸತತವಾಗಿ ಎರಡನೇ ಬಾರಿಗೆ ಆಯ್ಕೆಯಾದರು, ವೈಸ್ ಚೇರ್‌ಮನ್ನರಾಗಿ ಶ್ರೀ ಮಂಜುನಾಥ ಎಸ್. ಮುನವಳ್ಳಿ ಇವರು ಆಯ್ಕೆಯಾದರು, ಗೌರವ ಕಾರ್ಯದರ್ಶಿಗಳಾಗಿ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ ಇವರು ಎರಡನೇ ಬಾರಿಗೆ ಆಯ್ಕೆಯಾದರು, ಇವರುಗಳನ್ನು ದಿನಾಂಕ:-21.04.2024 ರಿಂದ 22.04.2025 ರ ಅವಧಿಗಾಗಿ ಆಯ್ಕೆ ಮಾಡಲಾಯಿತು,

ವಿಜೃಂಭಣೆಯಿಂದ ಜರುಗಿದ ಸದ್ಗುರು ಶ್ರೀಸಿದ್ಧಾರೂಢ ಸ್ವಾಮಿಗಳವರ 188 ನೇ ಜನ್ಮೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 188 ನೇ ಜನ್ಮೋತ್ಸವವನ್ನು ದಿನಾಂಕ: 17.04.2024 ರಂದು ಅತೀ ವಿಜೃಂಭಣೆಯಿಂದ ನೆರವೇರಿಸಲಾಯಿತು. ಜನ್ಮೋತ್ಸವದ ಅಂಗವಾಗಿ ಪ್ರಾತ:ಕಾಲ 5:30 ಘಂಟೆಗೆ ಉಭಯಶ್ರೀಗಳವರ ಗದ್ದುಗೆಗಳಿಗೆ ಅಭೀಷೇಕ, ಅಪರಾಹ್ನ:12-00 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವುದು, 12-30 ಘಂಟೆಗೆ ಶ್ರೀಗಳವರ ಉತ್ಸವ ಮೂರ್ತಿಯ ಪಾಲಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಾಯಂಕಾಲ:5-30 ಘಂಟೆಗೆ ಕುಂಭಹೊತ್ತ ಮಹಿಳೆಯರು ಶ್ರೀಮಠಕ್ಕೆ ಬರಮಾಡಿಕೊಂಡರು. 5:45 ಘಂಟೆಗೆ ಶ್ರೀಮಠದ ಕೈಲಾಸಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ ಇವರು ಚಾಲನೆಯನ್ನು ನೀಡಿ, ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಟ್ರಸ್ಟ್ ಕಮೀಟಿ ವತಿಯಿಂದ ನಿರ್ಮಿಸಿದ ಜಗದ್ಗುರು ಶ್ರೀ ಸಿದ್ಧಾರೂಢರ ಅತಿಥಿಗೃಹ, ಉಭಯ ಶ್ರೀಗಳವರ ಮಂದಿರಗಳ ಮುಂದಿರುವ ಆವರಣದ ನೆಲಕ್ಕೆ ಗ್ರಾನೈಟ್ ಕಲ್ಲುಗಳ ಜೋಡಣೆ ಕೆಲಸ ಮತ್ತು ಯಾತ್ರಿ ನಿವಾಸ ಕೊಠಡಿಗಳ ನವೀಕರಣದ ಉದ್ಘಾಟನೆಯನ್ನು ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ ಇವರು ವಹಿಸಿದ್ದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಡಾ||ಗೋವಿಂದ ಗು. ಮಣ್ಣೂರ, ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ, ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸದರ ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ, ಮಹಾರಾಷ್ಟ, ಗೋವಾ ಹಾಗೂ ಇನ್ನೂ ಅನೇಕ ಊರುಗಳಿಂದ ಬಂದ ಸಾವಿರಾರು ಜನ ಭಕ್ತ ಸಮೂಹ ಪಡೆದುಕೊಂಡರು.

ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವವನ್ನು ದಿನಾಂಕ: 09-04-2024 ರಿಂದ 17-04-2024 ರವರೆಗೆ ಆಚರಿಸಲಾಗುತ್ತಿದ್ದು. ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ: 17-04-2024 ರಂದು ಮಧ್ಯಾಹ್ನ 12 ಘಂಟೆಗೆ ಶ್ರೀಗಳವರ ಪಾಲಕಿಯು ವಾದ್ಯ ಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ ಸಾಯಂಕಾಲ 5 ಘಂಟೆಗೆ ಆರತಿ ಹಾಗೂ ಕುಂಬ ಹೊತ್ತ ಮಹಿಳೆಯರು ಸ್ವಾಗತಿಸಿಕೊಂಡ ನಂತರ ಶ್ರೀಮಠಕ್ಕೆ ತಲುಪುವುದು ನಂತರ ಶ್ರೀಗಳವರ ತೊಟ್ಟಿಲೋತ್ಸವ ನಡೆಯುವುದು. ಈ ಎಲ್ಲಾ ಕಾರ್ಯಕ್ರಮಗಳ ಪ್ರಯೋಜನವನ್ನು ಭಕ್ತಾದಿಗಳು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇವೆ.

ರಮ್‌ಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-೧೧-೦೪-೨೦೨೪ ರಂದು ರಮ್‌ಜಾನ್ ಹಬ್ಬದ ನಿಮಿತ್ಯವಾಗಿ ಮುಸ್ಲಿಂ ಬಾಂಧವರಾದ ಡಾ|| ಬಿಜಾಪೂರ, ಶ್ರೀ ಶಿರಾಜ್‌ಅಹಮದ್ ಖುರ್ಚಿವಾಲೆ, ಶ್ರೀ ಎಜಾಜ್ ಜಾಗೀರದಾರ ಹಾಗೂ ಇತರರು ಶ್ರೀಮಠಕ್ಕೆ ಆಗಮಿಸಿ ಉಭಯ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿ ವತಿಯಿಂದ ರಮ್‌ಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಜಿ.ಎಸ್.ನಾಯ್ಕ, ಭಕ್ತರಾದ ಶ್ರೀ ಶಾಂತರಾಜ ಪೋಳ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಎಸ್. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಉಮೇಶ ಅಡಿಗ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-09.04.2024 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಉಮೇಶ ಅಡಿಗ ಹಾಗೂ ಇವರ ಜೊತೆಗೆ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಎ.ಎಸ್.ಬೆಳ್ಳೂಂಕಿ ಇವರು ಶ್ರೀಮಠಕ್ಕೆ ಆಗಮಿಸಿ ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳನ್ನು ಶ್ರೀಮಠದ ವತಿಯಿಂದÀ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಿನಾಯಕ ಅ. ಘೋಡ್ಕೆ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಎಸ್. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು.

ಒಂಭತ್ತನೇಯ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ 188 ನೇ ಜಯಂತ್ಯೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಒಂಭತ್ತನೇಯ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ದಿನಾಂಕ:-10.04.2024 ರಂದು ಮುಂಜಾನೆ :- 10-00 ಘಂಟೆಗೆ ಉದ್ಘಾಟನಾ ಸಮಾರಂಭವು ಜರುಗಿತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರಾದ ಶ್ರೀ ಶಾಮಾನಂದ ಪೂಜೇರಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರುಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಉಪಸ್ಥಿತರಿದ್ದರು, ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮ ನಿರೂಪಿಸಿದರು, ಶ್ರೀ ಮಠದ ಮ್ಯಾನೇಜರ್ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗದವರು ಹಾಗೂ ಭಕ್ತರು ಹಾಜರಿದ್ದರು.

ಪಂಚಲೋಹದ ನಾಗಾಭರಣ ದೇಣಿಗೆ

ದಿನಾಂಕ:-09.04.2024 ರಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮತಿ ಎಚ್.ಬಿ.ಸರೋಜಮ್ಮ ಇವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲ್ವೇ ಸ್ಟೇಷನ್‌ನಲ್ಲಿರುವ ಶ್ರೀ ಸಿದ್ಧಾರೂಢ ಸ್ವಾಮಿಯವರ ಮೂರ್ತಿಗೆ ಅಲಂಕಾರ ಮಾಡಲಿಕ್ಕೆ ಪಂಚಲೋಹದ ನಾಗಾಭರಣವನ್ನು ದೇಣಿಗೆಯಾಗಿ ನೀಡಿರುತ್ತಾರೆ. ದಾನಿಗಳಿಗೆ ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ಚೇರಮನ್ನರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಜಗದೀಶ ಲ. ಮಗಜಿಕೊಂಡಿ, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಆಯ್.ಜಿ.ಸನದಿ ಹಾಗೂ ಭಕ್ತವೃಂದದವರು ಹಾಜರಿದ್ದರು.

🌷🙏 ಕೌದಿ ಪೂಜಾ ಮಹತ್ವ 🙏🌷

ಅದ್ವೈತ ಸಾರ್ವಭೌಮ ಚಕ್ರವರ್ತಿ, ಸ್ಥಿತಪ್ರಜ್ಞ, ನಿರಾಭಾರಿ ನಿರ್ಗುಣ ಬ್ರಹ್ಮ, ದೇಶ ಕಂಡ ಶ್ರೇಷ್ಠ ಸಂತ, ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಕೇವಲ ಕೌಪಿನ ಧಾರಣೆಯಾಗಿ ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ಸಂಚರಿಸಿದ ಮಹಾಯೋಗಿ, ಎಷ್ಟೋ ದಿನಗಳ ವರೆಗೆ ಅನ್ನ ನೀರು ತ್ಯಜಿಸಿ ತಪಸ್ಸನ್ನು ಮಾಡಿದ ಮಹಾನ್ ತಪಸ್ವಿ, ಕೊನೆಗೆ ಹುಬ್ಬಳ್ಳಿಯಲ್ಲಿ ನೆಲೆಸಿ ಭಕ್ತರು ದಾನಿಗಳು ಕೊಟ್ಟಂತ ಬಂಗಾರ ವಜ್ರ ವೈಡೂರ್ಯಗಳ ಅಲಂಕಾರದಿಂದ ಪೂಜೆ ಗೈದರು ಹಿಗ್ಗದೆ ತಲೆಯ ಮೇಲೆ ಬೆಂಕಿಯನಿಟ್ಟರು ಕುಗ್ಗದೆ ಸದಾ ಸ್ಥಿತಿಪ್ರಜ್ಞ ಸ್ಥಿತಿಯಲ್ಲಿ ಸರ್ವ ಭಕ್ತರನ್ನು ಉದ್ದರಿಸಿದ ಮಹಾನ್ ಯೋಗಿ. ನಿಜವಾದ ಸಾಧು ಸತ್ಪುರುಷರ ನಿಜ ಸ್ವರೂಪ ಮತ್ತು ವೈರಾಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ & ಸದ್ಗುರುಗಳ ಇಚ್ಚೆಯಂತೆ ವರ್ಷದಲ್ಲಿ ಒಂದು ದಿನ " ಕೌದಿ ಪೂಜೆ "ಯನ್ನು ಆಚರಣೆಗೆ ತರಲಾಯಿತು.... ಓಂ ನಮಃ ಶಿವಾಯ 🌷🙏🌷

2024 ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವ

2024 ನೇ ಸಾಲಿನ ಶಿವರಾತ್ರಿ ಜಾತ್ರಾ ಮಹೋತ್ಸವ

2024 ನೇ ವರ್ಷದ ಶಿವರಾತ್ರಿ ಮಹೋತ್ಸವಕ್ಕೆ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು, ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಹಾಗೂ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ. & ಶ್ರೀ ಮಠದ ಧರ್ಮದರ್ಶಿಗಳು ಭಕ್ತವೃಂದಕ್ಕೆ ಮಾಡುವ ವಿನಯಪೂರ್ವಕ ವಿಜ್ಞಾಪನೆಗಳು

ಮಹಾಶಿವರಾತ್ರಿ ಮಹೋತ್ಸವವು ಇದೇ ಶೋಭಕೃತನಾಮ ಸಂವತ್ಸರ ಮಾಘ ವದ್ಯ ಸಪ್ತಮಿ ದಿನಾಂಕ: 03.03.2024 ರವಿವಾರದಂದು ಸೂರ್ಯೋದಯಕ್ಕೆ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗುವುದು. ಪ್ರತಿನಿತ್ಯ ಬೆಳಿಗ್ಗೆ 07-45 ಘಂಟೆಗೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, ಮುಂಜಾನೆ 09-00 ಘಂಟೆಗೆ ಮಹಾತ್ಮರಿಂದ, ಪಂಡಿತರಿ0ದ ವೇದಾಂತ ಉಪನ್ಯಾಸಗಳು ನಡೆಯುವವು. ಸಾಯಂಕಾಲ 05-00 ಘಂಟೆಗೆ ಕೀರ್ತನೆ ನಡೆದು ಮಹಾಪೂಜೆ ನಡೆಯುವುದು. ದಿನಾಂಕ: 08.03.2024 ರ ಮಾಘ ವದ್ಯ ತ್ರಯೋದಶಿ ಶುಕ್ರವಾರ ಮಹಾಶಿವರಾತ್ರಿ ಜಾಗರಣೆ ನಿಮಿತ್ಯ ಪಲ್ಲಕ್ಕಿ ಉತ್ಸವವು ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಶ್ರೀಮಠಕ್ಕೆ ಬರುವುದು. ದಿನಾಂಕ 09.03.2024 ನೇ ಶನಿವಾರ ಪಲ್ಲಕ್ಕಿ ಉತ್ಸವ ನಂತರ ಸಾಯ0ಕಾಲ 05-30 ಘಂಟೆಗೆ ರಥೋತ್ಸವ ಜರುಗುವುದು. ದಿನಾಂಕ 10.03.2024 ರ ರವಿಮವಾರ ಶಿವರಾತ್ರಿ ಅಮವಾಸ್ಯೆ ಬೆಳಿಗ್ಗೆ 05-00 ರಿಂದ ೦6:೦೦ ಘಂಟೆ ವರೆಗೆ ಭಸ್ಮ ಸ್ನಾನ ನೆರವೇರುವುದು. ದಿನಾಂಕ 11.03.2024 ನೇ ಸೋಮವಾರ ಸಾಯಂಕಾಲ 6 ಘಂಟೆಗೆ ಕೌದಿ ಪೂಜೆಯೊಂದಿಗೆ ಉತ್ಸವವು ಸಮಾಪ್ತವಾಗುವದು. ಕಾರಣ ಸದ್ಭಕ್ತರು ಸಹ ಕುಟುಂಬ ಪರಿವಾರದೊಡನೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮತ್ತು ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಯವರ ದರ್ಶನ ಆಶೀರ್ವಾದ ಪಡೆದು ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು ಮನ ಧನ ದಿಂದ ಸೇವೆ ಸಲ್ಲಿಸಿ, ಸದ್ಗುರು ಶ್ರೀ ಸಿದ್ಧಾರೂಢರ ಮತ್ತು ಸದ್ಗುರು ಶ್ರೀ ಗುರುನಾಥಾರೂಢರ ಕೃಪೆಗೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕಾಗಿ ವಿನಂತಿ.

ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಲಕ್ಷ ರುದ್ರಾಭಿಷೇಕ ಮತ್ತು ತುಲಾಭಾರ ಸೇವಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ ಕಮೀಟಿಯಿಂದ ಜಗದ್ಗುರು ಶ್ರೀ ಸಿದ್ಧಾರೂಢರ 190ನೇ ಜಯಂತಿ ಉತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ 2024 ನೇ ಸಾಲಿನ ಶಿವರಾತ್ರಿ ಮಹೋತ್ಸವದಿಂದ 2025 ನೇ ಸಾಲಿನ ಶಿವರಾತ್ರಿ ಮಹೋತ್ಸವದ ವರೆಗೆ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ನಿಮಿತ್ತ ಲಕ್ಷ ರುದ್ರಾಭಿಷೇಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದಿನಾಂಕ:-18.02.2024 ರಂದು ಮುಂಜಾನೆ ೦9-೦೦ ಘಂಟೆಗೆ ನೆರವೇರಿತು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ಪರಮ ಪೂಜ್ಯ ಶಾಂತಾನAದ ಸ್ವಾಮಿಗಳು, ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಮೇಲ್ಮನೆ ಸಭಾ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ ಇವರು ವಹಿಸಿದ್ದರು. ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಚ. ಕಲ್ಯಾಣಶೆಟ್ಟರ, ಲಕ್ಷ ರುದ್ರಾಭಿಷೇಕ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಅಂದಾನಪ್ಪ ಚ. ಚಾಕಲಬ್ಬಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷರುದ್ರಾಭಿಷೇಕ ಮತ್ತು ತುಲಾಭಾರ ಸೇವೆ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷರಾದ ಶ್ರೀ ಶಾಮಾನಂದ ಬಾಳಪ್ಪ ಪೂಜೇರಿ ಇವರು ಸ್ವಾಗತಿಸಿದರು, ತುಲಾಭಾರ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ವಿನಾಯಕ ಅ. ಘೋಡ್ಕೆ, , ಭಕ್ತರ ಮೇಲ್ಮನೆ ಸಭಾ ಉಪಾಧ್ಯಕ್ಷರಾದ ಶ್ರೀ ಬಿ.ಆರ್.ಬಾಗೇವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಮಂಜುನಾಥ ಎಸ್ ಮುನವಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀ ಚನ್ನವೀರ ಮುಂಗರವಾಡಿ, ಶ್ರೀಮತಿ ಗೀತಾ ಟಿ ಕಲಬುರ್ಗಿ, ಶ್ರೀ ವಿ.ಡಿ. ಕಾಮರೆಡ್ಡಿ, ಶ್ರೀ ರಮೇಶ ಎಸ್ ಬೆಳಗಾವಿ, ಇವರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್. ಕೋಳಕೂರ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಶ್ರೀಮಠದ ಮ್ಯಾನೇಜರ ಈರಣ್ಣ ಎಸ್ ತುಪ್ಪದ ಮತ್ತು ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.

75ನೇ ಗಣರಾಜ್ಯೋತ್ಸವ ದಿನ.

ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ: 26.01.2024 ರಂದು 75ನೇ ಗಣರಾಜ್ಯೋತ್ಸವ ದಿನದ ಧ್ವಜಾರೋಹಣವನ್ನು ಟ್ರಸ್ಟ್ ಕಮೀಟಿಯವತಿಯಿಂದ ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಬೆಳಿಗ್ಗೆ 8-30 ಘಂಟೆಗೆ ಪೂಜೆ ನೆರವೇರಿಸಿ ಧ್ವಜಾರೋಹಣವನ್ನು ನೆರವೇರಿಸಿದರು, ಪೂಜ್ಯ ಶ್ರೀ ಶಾಂತಾನಂದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರು ಸಾನಿಧ್ಯವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ವಿ.ವಿ.ಮಲ್ಲಾಪೂರ ಮತ್ತು ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ತುಪ್ಪದ, ಶ್ರೀಮಠದ ಸಾಧುಗಳು, ಸಿಬ್ಬಂದಿವರ್ಗದವರು, ಪಾಠಶಾಲಾ ವಿದ್ಯಾರ್ಥಿಗಳು, ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

Main office renovation and Development works Inauguration function held on 11.01.2024.

11.01.2024 ರಂದು ಕಾರ್ಯಾಲಯ ಉದ್ಘಾಟನೆ, & ವಿವಿಧ ಕೆಲಸಗಳು ಅಡಿಗಲ್ಲು ಕಾರ್ಯಕ್ರಮವನ್ನು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಉದ್ಘಾಟನೆ ಮಾಡಿದರು. ಈ ಸಂದರ್ಭದಳ್ಳಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷರಾದ ಶ್ರೀ ಉದಯಕುಮಾರ್ ನಾಯ್ಕ, ಗೌರವ ಕಾರ್ಯದರ್ಶಿಗಳ ಶ್ರೀಮತಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಮಂಜುನಾಥ ಮುನರಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಶ್ರೀ ರಮೇಶ್ ಬೆಳಗಾವಿ ಇವರು ಉಪಸ್ಥಿತರಿದ್ದರು

Room Reservation counter opening function.

05.01.2024 ರಂದು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಕೊಠಡಿ ಕಾಯ್ದಿರಿಸುವಿಕೆ ಕೌಂಟರ್ ಉದ್ಘಾಟನೆ ಮಾಡಿದರು. ಈ ಸಂದರ್ಭದಳ್ಳಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷರಾದ ಶ್ರೀ ಉದಯಕುಮಾರ್ ನಾಯ್ಕ, ಗೌರವ ಕಾರ್ಯದರ್ಶಿಗಳ ಶ್ರೀಮತಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಮಂಜುನಾಥ ಮುನರಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಶ್ರೀ ರಮೇಶ್ ಬೆಳಗಾವಿ ಇವರು ಉಪಸ್ಥಿತರಿದ್ದರು

Calendar opening function

05.01.2024 ರಂದು ಶ್ರೀ ಮಠದ ಮುಖ್ಯ ಆಡಳಿತಾಧಿಕಾರಿಗಳು ಮತ್ತು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಜಿ.ಶಾಂತಿ ಮೇಡಂ ಇವ್ರು 2024 ನೇ ಸಾಲಿನ ಕ್ಯಾಲೆಂಡರ್ ಅನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಳ್ಳಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಉಪಾಧ್ಯಕ್ಷರಾದ ಶ್ರೀ ಉದಯಕುಮಾರ್ ನಾಯ್ಕ, ಗೌರವ ಕಾರ್ಯದರ್ಶಿಗಳ ಶ್ರೀಮತಿ ಸರ್ವಮಂಗಳ ಪಾಠಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಮುಂಗುರುವಾಡಿ, ಬಾಳು ಮಗಜಿಕೊಂಡಿ, ಮಂಜುನಾಥ ಮುನರಳ್ಳಿ, ಡಾ|| ಗೋವಿಂದ ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಶ್ರೀ ರಮೇಶ್ ಬೆಳಗಾವಿ ಇವರು ಉಪಸ್ಥಿತರಿದ್ದರು

ಶ್ರೀಮಠದಲ್ಲಿ ದಿ:-12.12.23 ರಂದು ಲಕ್ಷದೀಪೋತ್ಸವ ಕಾರ್ಯಕ್ರಮದ

ಶ್ರೀಮಠದಲ್ಲಿ ದಿನಾಂಕ:-12.12.2023 ರಂದು ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಪತ್ರಿಕಾಗೋಷ್ಠಿ

ಶ್ರೀಮನ್ ನಿಜಗುಣ ಶಿವಯೋಗಿಗಳ ಜಯಂತಿ ಕಾರ್ಯಕ್ರಮ

ಶ್ರೀಮಠದಲ್ಲಿ ದಿನಾಂಕ: 04.12.2023 ರಿಂದ ದಿನಾಂಕ: 06.12.2023 ರವರೆಗೆ ನಡೆಯುವ ಶ್ರೀಮನ್ ನಿಜಗುಣ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀಮಠದಲ್ಲಿ ಪ್ರತಿ ದಿನ ಬೆಳಿಗ್ಗೆ 9 ಘಂಟೆಯಿ0ದ 12 ಘಂಟೆಯವರೆಗೆ ಪೂಜ್ಯ ಮಹಾತ್ಮರಿಂದ ಶಾಸ್ತ್ರ ಪ್ರವಚನ ನಡೆಯುತ್ತವೆ. ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಕುಟುಂಬ ಪರಿವಾರದೊಂದಿಗೆ ಆಗಮಿಸಿ ಉಭಯಶ್ರೀಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿ

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀಮನ್ನಿಜಗುಣ ಶಿವಯೋಗಿಗಳ ಜಯಂತಿ ಕಾರ್ಯಕ್ರಮ.

ದಿ:-27.11.23 ಶ್ರೀ ಸಿದ್ಧಾರೂಢ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ

ದಿ:-27.11.23 ಎರಡು ಗೌರಿ ಹುಣ್ಣಿಮೆ & ಭಾಗವತ ಸಪ್ತ ಮುಕ್ತಾಯ ಗೋಪಾಳ ಕಾಳ & ಶ್ರೀ ಸಿದ್ಧಾರೂಢ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ

2023 ನೇ ಸಾಲಿನ ಜಲ ರಥೋತ್ಸವ

2023 ನೇ ಸಾಲಿನ ಜಲ ರಥೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ “ಪ್ರಸಾದ್ ಯೋಜನೆಯ” ಅಡಿಯಲ್ಲಿ ಅನುದಾನ ಬಿಡುಗಡೆಗಾಗಿ ಶಿಫಾರಸ್ಸು ಪತ್ರವನ್ನು ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ, ಮಾನ್ಯ ಸಚಿವರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ಸಲ್ಲಿಸಲಾಯಿತು.

ಸ್ವಚ್ಛತಾ ಶ್ರಮದಾನ

ದಿನಾಂಕ:- 1- 10-2023 ರಂದು ಮುಂಜಾನೆ:- 9:30 ಗಂಟೆಗೆ ಹುಬ್ಬಳ್ಳಿ ವಲಯದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶ್ರೀಮಠದಲ್ಲಿ ಸ್ವಚ್ಛತಾ ಶ್ರಮದಾನ ವನ್ನು ಮಾಡಲಿಕ್ಕೆ ಶ್ರೀ ಮಠಕ್ಕೆ ಆಗಮಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 1, 2023 ರಂದು ಬೆಳಗ್ಗೆ 10 ಗಂಟೆಗೆ ಸ್ವಚ್ಛ ಭಾರತದ ಭಾಗವಾಗಿ ಸ್ವಚ್ಛತಾ ಅಭಿಯಾನ ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಭಾರತದ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಲು ಈ ಉದಾತ್ತ ಪ್ರಯತ್ನಕ್ಕೆ ಕೈ ಜೋಡಿಸಿ ಎಂದು ದೇಶದ ನಾಗರಿಕರಿಗೆ ಕರೆ ನೀಡಿದರು ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯಕ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಬಾಳು ಮಗಜಿಕೊಂಡಿ,ಶ್ರೀ ಚನ್ನವೀರ ಮುಂಗರವಾಡಿ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಅಪಾರ ಭಕ್ತ ವೃಂದದವರು ಉಪಸ್ಥಿತರಿದ್ದರು.

Date:-26.08.2023 to 01.09.2023 Shravana Jal Rathotsava Saptaha. Date:-01.09.2023 Evening 5-00 PM Jal Rathotsava.

Date:-26.08.2023 to 01.09.2023 Shravana Jal Rathotsava Saptaha. Date:-01.09.2023 Evening 5-00 PM Jal Rathotsava.

ದಿ:-17.08.2023 ರ ಶ್ರಾವಣ ಮಾಸದಲ್ಲಿ ಮಳೆ, ಬೆಳೆ ಸುಭೀಕ್ಷೆಗಾಗಿ ಹಾಗೂ ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ನಡೆಯುವ ಕೋಟಿ ಜಪ ಯಜ್ಞದ ಉದ್ಘಾಟನಾ ಸಮಾರಂಭ

ದಿ:-17.08.2023 ರ ಶ್ರಾವಣ ಮಾಸದಲ್ಲಿ ಮಳೆ, ಬೆಳೆ ಸುಭೀಕ್ಷೆಗಾಗಿ ಹಾಗೂ ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ನಡೆಯುವ ಕೋಟಿ ಜಪ ಯಜ್ಞದ ಉದ್ಘಾಟನಾ ಸಮಾರಂಭ

Date:-16.08.2023 to 14.09.2023 Koti Japa Yagna Progaram in Sri Siddharoodha Swamiji Math, Hubli

Date:-16.08.2023 to 14.09.2023 Koti Japa Yagna Progaram in Sri Siddharoodha Swamiji Math, Hubli

ದಿ:-16.08.2023 ರಿಂದ 15.08.2023 ರ ವರೆಗೆ ಶ್ರಾವಣ ಮಾಸದಲ್ಲಿ ಮಳೆ, ಬೆಳೆ ಸುಭೀಕ್ಷೆಗಾಗಿ ಹಾಗೂ ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ನಡೆಯುವ ಕೋಟಿ ಜಪ ಯಜ್ಞದ ಉದ್ಘಾಟನಾ ಸಮಾರಂಭ

ದಿ:-೧೬.೦೮.೨೦೨೩ ರಿಂದ ೧೫.೦೮.೨೦೨೩ ರ ವರೆಗೆ ಶ್ರಾವಣ ಮಾಸದಲ್ಲಿ ಮಳೆ, ಬೆಳೆ ಸುಭೀಕ್ಷೆಗಾಗಿ ಹಾಗೂ ವಿಶ್ವಶಾಂತಿ ಮತ್ತು ಲೋಕಕಲ್ಯಾಣಕ್ಕಾಗಿ ನಡೆಯುವ ಕೋಟಿ ಜಪ ಯಜ್ಞದ ಉದ್ಘಾಟನಾ ಸಮಾರಂಭ

August - 15th Function in Sri Siddharoodha Swamiji Math, Hubli

August - 15th Function in Sri Siddharoodha Swamiji Math, Hubli

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಯೋಗ ದಿನಾಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ಯೋಗ ದಿನಾಚರಣೆ ದಿನಾಂಕ:-೨೧-೦೬-೨೦೨೩ ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ಕೈಲಾಸ ಮಂಟಪ ಮುಂದಿನ ಆವರಣದಲ್ಲಿ ದಿನಾಂಕ:-೨೧.೦೬.೨೦೨೩ ರಂದು ಮುಂಜಾನೆ:-೦೬-೦೦ ಘಂಟೆಗೆ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡುವುದರ ಬಗ್ಗೆ ಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಇವರು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯಕ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಹಾಗೂ ಅಪಾರ ಭಕ್ತ ವೃಂದದವರು ಉಪಸ್ಥಿತರಿದ್ದರೆಂದು ಶ್ರೀಮಠದ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.

ಶ್ರೀ ಸಿದ್ಧಾರೂಢಸ್ವಾಮಿಯವರ ಮಠಕ್ಕೆ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ

ದಿನಾಂಕ:-೧೦-೦೬-೨೦೨೩ ರಂದು ಕರ್ನಾಟಕ ಸರ್ಕಾರದ ಕಾನೂನು ಹಾಗೂ ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವರಾದ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ ಇವರು ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಜಿಯವರ ಮಠಕ್ಕೆ ಆಗಮಿಸಿ ಉಭಯಶ್ರೀಗಳವರ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಲಾಯಿತು

"E-Hundi"

Date:-On 25.05.2023 The State Bank of India Regional Office issued QR Code “E Hundi” to devotees, Public who donate to Sri Math, donate through mobile.

ಗೌರವಾನ್ವಿತ ಶ್ರೀಮತಿ ಕೆ ಜಿ ಶಾಂತಿ ಮೇಡಂ, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಧಾರವಾಡ ಇವರ 25ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀಮಠದಿಂದ ಅಭಿನಂದಿಸಲಾಯಿತು...

ಗೌರವಾನ್ವಿತ ಶ್ರೀಮತಿ ಕೆ ಜಿ ಶಾಂತಿ ಮೇಡಂ, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಧಾರವಾಡ ಇವರ 25ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀಮಠದಿಂದ ಅಭಿನಂದಿಸಲಾಯಿತು...

ಗೌರವಾನ್ವಿತ ಶ್ರೀಮತಿ ಕೆ ಜಿ ಶಾಂತಿ ಮೇಡಂ, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಧಾರವಾಡ ಇವರ 25ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀಮಠದಿಂದ ಅಭಿನಂದಿಸಲಾಯಿತು...

ಗೌರವಾನ್ವಿತ ಶ್ರೀಮತಿ ಕೆ ಜಿ ಶಾಂತಿ ಮೇಡಂ, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತ ಅಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಧಾರವಾಡ ಇವರ 25ನೇ ವಿವಾಹ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀಮಠದಿಂದ ಅಭಿನಂದಿಸಲಾಯಿತು...