Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಭಗವಚ್ಚಿಂತನ
Date:-10.08.2026 ಶ್ರೀಮಠದಲ್ಲಿ ಭಗವಚ್ಚಿಂತನ ಸಾಧನ ಶಿಬಿರ ಮುಕ್ತಾಯ
ನಾಗರ ಅಮವಾಸ್ಯೆ
12-08-2026, ನಾಗರ ಅಮವಾಸ್ಯೆ
ಜಲರಥೋತ್ಸವ
Date:-29.08.2026 ಶ್ರೀ ಸಿದ್ಧಾರೂಢಸ್ವಾಮಿಗಳ ಪುಣ್ಯಾರಾಧನೆ, ಜಲರಥೋತ್ಸವ
ಸ್ವಾತಂತ್ರ್ಯ ದಿನಾಚರಣೆ
Date:-15.08.2026 ಸ್ವಾತಂತ್ರ್ಯ ದಿನಾಚರಣೆ
ಶ್ರಾವಣ ಮಾಸದ ಸಪ್ತಾಹ
Date:-23-08-2026 ಶ್ರೀ ಸಿದ್ಧಾರೂಢಸ್ವಾಮಿಗಳ ಶ್ರಾವಣ ಮಾಸದ ಸಪ್ತಾಹ ಆರಂಭ

Daily News
ಜ್ಞಾನ ದಾಸೋಹ, ಅನ್ನದಾಸೋಹ, ನಾಮಸ್ಮರಣೆ ದಾಸೋಹ ಈ ತ್ರಿವಿಧ ದಾಸೋಹ ನಡೆಯುವ ವಿಶ್ವದ ಏಕೈಕ ಜಾತ್ಯಾತೀತ ಅವಿಮುಕ್ತ ಕ್ಷೇತ್ರ ಜಗದ್ಗುರು ಶ್ರೀ ಸಿದ್ಧಾರೂಢರ ಮಠ – ಪೂಜ್ಯ ಸಹಜಾನಂದ ಶ್ರೀಗಳು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ 16.07.2026 ರಿಂದ 10.08.2026 ರವರೆಗೆ 18ನೇ ವರ್ಷದ ಆರೂಢ ತತ್ವಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಆಶೀರ್ವಚನವನ್ನು ನೀಡಿದರು, ಹುಬ್ಬಳ್ಳಿಯ ಶ್ರೀಮಠದಲ್ಲಿ ಸತತವಾಗಿ ಹದಿನೆಂಟು ವರ್ಷಗಳ ಪರಿಯಂತರವಾಗಿ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿಕೊಂಡು ಬಂದಿದ್ದು ಅತ್ಯಂತ ಶ್ಲಾö್ಯಘನೀಯವಾದ ವಿಷಯವಾಗಿದೆ, ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ, ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತೀ ವಿರಳ, ಇಂತಹದರಲ್ಲಿ ಶ್ರೀಮಠದಿಂದ ಹದಿನೆಂಟು ವರ್ಷಗಳವರೆಗೆ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ, ಪಾರಮಾರ್ಥಗೀತೆ, ಸಿದ್ಧಾರೂಢರ ಚರಿತ್ರೆ ಹಾಗೂ ಶ್ರೀಮನ್ ನಿಜಗುಣ ಸ್ವಾಮಿಗಳ ಶಾಸ್ತç ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟ ಶ್ರೀಮಠದ ಎಲ್ಲಾ ಧರ್ಮದರ್ಶಿಗಳಿಗೆ ಸಿದ್ಧಾರೂಢರ ಕೃಪಾಶೀರ್ವಾದ ಇರಲೆಂದು ಹೃದಯ ತುಂಬಿ ಹಾರೈಸಿದರು. ಸಾನಿಧ್ಯವನ್ನು ನ್ಯಾಯ ವೇದಾಂತಾಚಾರ್ಯ ಪರಮ ಪೂಜ್ಯ ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು ನೇತೃತ್ವವನ್ನು ಸ್ಥಾನವನ್ನು ಅಣ್ಣಿಗೇರಿ ದಾಸೋಹ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಇವರು ವಹಿಸಿದ್ದರು. ಸಮ್ಮುಖ ಸ್ಥಾನವನ್ನು ಪರಮ ಪೂಜ್ಯ ಶ್ರೀ ಸೋಮೇಶ್ವರಾನಂದ ಮಹಾಸ್ವಾಮಿಗಳು, ಸೈದಾಪುರ ಹಾಗೂ ಮಹಾಲಿಂಗಪುರ, ಪರಮ ಪೂಜ್ಯ ಶ್ರೀ ಯೋಗಿರಾಜ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಹಾಗೂ ಮಾತೋಶ್ರೀ ಶಶಿಕಲಾ ಮಾತಾ ಇವರುಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಡಿ.ಆರ್.ಪಾಟೀಲ, ಅಧ್ಯಕ್ಷರು, ಭಕ್ತರ ಮೇಲ್ಮನೆ ಸಭಾ ಇವರು ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಆರೂಢ ತತ್ತ÷್ವಚಿಂತನ ಸಾಧನ ಶಿಬಿರದ ಸಂಚಾಲಕರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಧರ್ಮದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀಮಠದ ಸಿಬ್ಬಂದಿ ವರ್ಗದವರು, ಶಿಬಿರಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು. ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಎಸ್.ಬಿ.ಐ.ಪ್ರಧಾನ ವ್ಯವಸ್ಥಾಪಕರ ಭೆಟ್ಟಿ

ದಿನಾಂಕ:-05.08.2026 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜಯ್‌ಕುಮಾರ ಝಾ, ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಣಿಕಂಡನ್ ರಾಮಕೃಷ್ಣನ್, ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ನಾಗಸುಬ್ಬಾರೆಡ್ಡಿ ಬಿ. ಇವರುಗಳು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದ ಪಡೆದುಕೊಂಡರು, ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿದ್ಧಾರೂಢ ನಗರ ಶಾಖೆಯ ವ್ಯವಸ್ಥಾಪಕರಾದ ಶ್ರೀ ಅಭಯ್‌ಕುಮಾರ ಇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದ ದಾಸೋಹದಲ್ಲಿ ಉಪಯೋಗಿಸಲಿಕ್ಕೆ ಬೈಲರ್, ಕುಕ್ಕರ್, ಕೋಲ್ಡ್ ಸ್ಪೋರೇಜ್ ಇವುಗಳನ್ನು ಬ್ಯಾಂಕಿನ ಸಿ.ಎಸ್.ಆರ್. ಫಂಡ್‌ನಲ್ಲಿ ಶ್ರೀಮಠಕ್ಕೆ ದೇಣಿಗೆ ಸಲ್ಲಿಸಲು ಟ್ರಸ್ಟ್ ಕಮೀಟಿ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ ಮತ್ತು ಶ್ರೀಮಠದ ಸಿಬ್ಬಂದಿವರ್ಗದವರು, ಎಸ್.ಬಿ.ಐ. ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಮಹೀಂದ್ರಾ ಬುಲೇರೋ ವಾಹನ ದೇಣಿಗೆ

ಇದೇ ದಿನಾಂಕ:-15.06.2026 ರ ಬೆಳಗ್ಗೆ : 08-30 ಘಂಟೆಗೆ ಸೆರೆಂಟಿಕಾ ವಿಂಡ್ ಪವರ್ ಕಂಪನಿ ವತಿಯಿಂದ ಶ್ರೀಮಠಕ್ಕೆ ಪ್ರತಿ ನಿತ್ಯ ನಡೆಯುವ ಅನ್ನದಾಸೋಹಕ್ಕೆ ಕಾಯಿಪಲ್ಲೆ ಹಾಗೂ ಇತರೆ ಆಹಾರ ಧಾನ್ಯಗಳನ್ನು ತರಲಿಕ್ಕೆ ಮಹಿಂದ್ರಾ ಬುಲೇರೋ ವಾಹನವನ್ನು ದೇಣಿಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸೆರೆಂಟಿಕಾ ವಿಂಡ್ ಪವರ್ ಕಂಪನಿಯ ಸಿ.ಓ. ಶ್ರೀ ಬಾಲಕೃಷ್ಣ, ಸೂರಜ್, ವೆಂಕಟರಡ್ಡಿ ಇವರುಗಳಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಮೇಲ್ಮನೆ ಸಭಾದ ಅಧ್ಯಕ್ಷರಾದ ಶ್ರೀ ಡಿ.ಆರ್.ಪಾಟೀಲ, ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ, ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡ್ಕೆ, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಮಾಜಿ ಚೇರ್‌ಮನ್ನರಾದ ಶ್ರೀ ಡಿ.ಡಿ.ಮಾಳಗಿ ಮತ್ತು ಶ್ರೀಮಠದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ದಿನಾಂಕ:-15.06.2026 ರ ಸೋಮವಾರ ದಂದು ರಾತ್ರಿ ೦8-೦೦ ಗಂಟೆಗೆ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಮೌನಯೋಗಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ ಮಠದ ಆವರಣದಲ್ಲಿ ಇರುವ ಪುಷ್ಕರಣಿಯಲ್ಲಿ “ಆರೂಢ ಆರತಿ” ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀಮತಿ ಕೆ.ಜಿ.ಶಾಂತಿ, ಗೌರವಾನ್ವಿತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ. ಇವರು ಕುಟುಂಬ ಸಮೇತರಾಗಿ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಮಂಜುನಾಥ ಎಸ್. ಮುನವಳ್ಳಿ ಮತ್ತು ಸಿಬ್ಬಂದಿವರ್ಗದವರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು

ಶ್ರೀ ಸಿದ್ಧಾರೂಢಸ್ವಾಮಿಯವರ ಮಠದ ಪುಷ್ಕರಣಿಯಲ್ಲಿ ಆರೂಢ ಆರತಿ

ದಿನಾಂಕ:16.05.2026 ರ ಶನಿವಾರ ದಂದು ಸಂಜೆ 06-15 ಗಂಟೆಗೆ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಹಾಗೂ ಮೌನಯೋಗಿ ಸದ್ಗುರು ಶ್ರೀ ಗುರುನಾಥಾರೂಢ ಮಹಾಸ್ವಾಮಿಗಳವರ ಮಠದ ಆವರಣದಲ್ಲಿ ಇರುವ ಪುಷ್ಕರಣಿಯಲ್ಲಿ “ಆರೂಢ ಆರತಿ” ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದ ಸಾನಿದ್ಯವನ್ನು ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ದಾಸೋಹ ಮಠ, ಅಣ್ಣಿಗೇರಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ನಾಗರಾಜ ಗೌರಿ, ರಾಜಕೀಯ ಮುಖಂಡರು ಹಾಗೂ ಶ್ರೀಮತಿ ಅರ್ಚನಾ ರುದ್ರೇಶ ಘಾಳಿ, ಮಾನ್ಯ ಆಯುಕ್ತರಾದ ಶ್ರೀ ರುದ್ರೇಶ ಘಾಳಿಯವರ ಧರ್ಮಪತ್ನಿ. ಅಧ್ಯಕ್ಷತೆಯನ್ನು ಟ್ರಸ್ಟ ಕಮೀಟಿಯ ಚೇರಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಹಿರಿಯ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಸರ್ವರನ್ನು ಸ್ವಾಗತಿಸಿದರು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಮತ್ತು ಸಿಬ್ಬಂದಿವರ್ಗದವರು ಹಾಗೂ ಅಪಾರ ಭಕ್ತಾದಿಗಳು ಪಾಲ್ಗೊಂಡಿದ್ದರು

ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದ ವತಿಯಿಂದ ವಾಣಿಜ್ಯ ಸಂಕಿರ್ಣ ಕಟ್ಟಡದ ಅಡಿಗಲ್ಲು ಸಮಾರಂಭ.

ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಸ್ಟೇಷನ್ ರಸ್ತೆಯಲ್ಲಿರುವ (ಜ್ಯೂಯಲುಕಾಸ್ ಗೋಲ್ಡ್ ಶೋ ರೂಮ್ ಎದುರಿಗೆ) ಶ್ರೀಮಠದ ಜಾಗೆಯಲ್ಲಿ ವಾಣಿಜ್ಯ ಸಂಕಿರ್ಣ ಕಟ್ಟಡದ ಅಡಿಗಲ್ಲು ಸಮಾರಂಭವು ದಿನಾಂಕ:-೧೫-೦೫-೨೦೨೬ ರಂದು ಸಾಯಂಕಾಲ:-೦೪-೦೦ ಘಂಟೆಗೆ ನೆರವೇರಿಸಲಾಯಿತು. ಉದ್ಘಾಟಕರಾಗಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು, ಹಾಗೂ ಧಾರವಾಡ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ ಇವರು ನೆರವೇರಿಸಿದರು, ದಿವ್ಯಸನ್ನಿದಾನವನ್ನು ಶ್ರೋ.ಬ್ರ.ಸದ್ಗುರು ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ, ವಂದನಾರ್ಪಣೆಯನ್ನು ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರುಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಶ್ರೀ ಶಾಮಾನಂದ ಬಾ. ಪೂಜೇರಿ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಿ.ಡಿ.ಕಾಮರಡ್ಡಿ ಉಪಸ್ಥಿತರಿದ್ದರು.

ಸನ್ಮಾನ್ಯ ಶ್ರೀಮತಿ ಬಿ.ಎಸ್. ಭಾರತಿ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರ ಅಭಿನಂದನಾ ಸಮಾರಂಭ

ಶಿವಾವತಾರಿ ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಶ್ರೀಮಠದಲ್ಲಿ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ, ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಧಾರವಾಡ ಜಿಲ್ಲಾ ಧಾರವಾಡ ಇವರಿಗೆ ಅಭಿನಂದನಾ ಸಮಾರಂಭವು ದಿನಾಂಕ:-೧೫-೦೫-೨೦೨೬ ರಂದು ಸಾಯಂಕಾಲ:-೦೭-೦೦ ಘಂಟೆಗೆ ನೆರವೇರಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ ಸೇವೆ ಸಲ್ಲಿಸಲಿಕ್ಕೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ, ಸಿದ್ಧಾರೂಢರನ್ನು ನೆನೆದರೆ ಸಾಕು ನಮ್ಮ ಕಷ್ಟಗಳು ಕ್ಷಣಾರ್ದದಲ್ಲಿ ನಿವಾರಣೆಯಾಗುತ್ತವೆ, ಶ್ರೀಮಠದಿಂದ ಭಕ್ತರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ಸೌಕರ್ಯಗಳನ್ನು ಟ್ರಸ್ಟ್ ಕಮೀಟಿಯು ಮಾಡಿಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂದು ತಮ್ಮ ಹಿತ ನುಡಿಗಳನ್ನು ನುಡಿದರು. ಕಾರ್ಯಕ್ರಮದ ದಿವ್ಯಸನ್ನಿದಾನವನ್ನು ಶ್ರೋ.ಬ್ರ.ಸದ್ಗುರು ಶ್ರೀ ದಯಾನಂದ ಸರಸ್ವತಿ ಮಹಾಸ್ವಾಮಿಗಳು, ಶ್ರೀ ಪೂರ್ಣಾನಂದ ಆಶ್ರಮ, ಕಾಡರಕೊಪ್ಪ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಧರ್ಮದರ್ಶಿಗಳಾದ ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ ಹಿತ ನುಡಿಗಳನ್ನು ನುಡಿದರು. ವಂದನಾರ್ಪಣೆಯನ್ನು ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ನೆರವೇರಿಸಿದರು, ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ನೆರವೇರಿಸಿದರು, ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಶ್ರೀ ಕೆ.ಎಲ್.ಪಾಟೀಲ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ವಿ.ಡಿ.ಕಾಮರಡ್ಡಿ ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಿಂದ ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿ ಇವರ ಭೆಟ್ಟಿ.

ದಿನಾಂಕ:-26.04.2026 ರಂದು ಸನ್ಮಾನ್ಯ ಶ್ರೀ ಸತೀಶ ಲ. ಜಾರಕಿಹೊಳಿ, ಮಾನ್ಯ ಸಚಿವರು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಬೆಳಗಾವಿ ಇವರು ಶ್ರೀಮಠದಕ್ಕೆ ಭೇಟಿ ಕೊಟ್ಟು ಉಭಯ ಶ್ರೀಗಳವರ ದರ್ಶನ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮಠದ ಚೇರ್‌ಮನ್ನರಾಗಿ ಶ್ರೀ ಬಾಳು ಟಿ. ಮಗಜಿಕೊಂಡಿ ಇವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ವೈಸ್-ಚೇರ್‌ಮನ್ನರಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಶ್ರೀ ಉದಯಕುಮಾರ ಡಿ. ನಾಯಕ ಹಾಗೂ ಶ್ರೀಮಠದ ಸಿಬ್ಬಂದಿಗಳು ಮತ್ತು ಭಕ್ತರು ಉಪಸ್ಥಿತರಿದ್ದರು




  VIEW ALL