ವಿಜೃಂಭಣೆಯಿAದ ಜರುಗಿದ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳವರ 190 ನೇ ಜನ್ಮೋತ್ಸವ
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ ೧೯೦ ನೇ ಜನ್ಮೋತ್ಸವವನ್ನು ದಿನಾಂಕ: 06-04-2025 ರಂದು ಅತೀ ವಿಜೃಂಭಣೆಯಿ0ದ ನೆರವೇರಿಸಲಾಯಿತು. ಜನ್ಮೋತ್ಸವದ ಅಂಗವಾಗಿ ಪ್ರಾತ:ಕಾಲ 5.30 ಘಂಟೆಗೆ ಉಭಯಶ್ರೀಗಳವರ ಗದ್ದುಗೆಗಳಿಗೆ ಅಭೀಷೇಕ, ಅಪರಾಹ್ನ:12-00 ಘಂಟೆಗೆ ಸುಮಂಗಲೆಯರಿಗೆ ಉಡಿತುಂಬುವುದು, 12-30 ಘಂಟೆಗೆ ಶ್ರೀಗಳವರ ಉತ್ಸವ ಮೂರ್ತಿಯ ಪಾಲಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಾಯಂಕಾಲ:5-30 ಘಂಟೆಗೆ ಕುಂಭಹೊತ್ತ ಮಹಿಳೆಯರು ಶ್ರೀಮಠಕ್ಕೆ ಬರಮಾಡಿಕೊಂಡರು. 5-45 ಘಂಟೆಗೆ ಶ್ರೀಮಠದ ಕೈಲಾಸಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀ ಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಚಾಲನೆಯನ್ನು ನೀಡಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ಕಮೀಟಿಯ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಡಾ||ಗೋವಿಂದ ಗು. ಮಣ್ಣೂರ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ವಸಂತ ವಾಯ್. ಸಾಲಗಟ್ಟಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಟಿ. ಕಲಬುರ್ಗಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ, ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸದರ ಕಾರ್ಯಕ್ರಮದ ಪ್ರಯೋಜನವನ್ನು ಕರ್ನಾಟಕ, ಮಹಾರಾಷ್ಟ, ಗೋವಾ ಹಾಗೂ ಇನ್ನೂ ಅನೇಕ ಊರುಗಳಿಂದ ಬಂದ ಸಾವಿರಾರು ಜನ ಭಕ್ತ ಸಮೂಹ ಪಡೆದುಕೊಂಡರು