Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಗೌರಿ ಹುಣ್ಣಿಮೆ
Date:-05.11.2025 ಗೌರಿ ಹುಣ್ಣಿಮೆ ಹಾಗೂ ಭಾಗವತ ಸಪ್ತಾಹ ಮುಕ್ತಾಯ ಗೋಪಾಳ ಕಾಳ ಹಾಗೂ ಶ್ರೀ ಸಿದ್ಧಾರೂಢ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವುದು.
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
Date:-11.11.2025 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಆರಂಭ
ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ
Date:-13.11.2025 ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಮುಕ್ತಾಯ

Daily News
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳು ಮತ್ತು ಸದಸ್ಯರುಗಳ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-06.11.2025 ರಂದು ಕರ್ನಾಟಕ ವಿಧಾನಸಭೆಯ ಉಪಸಭಾಪತಿಗಳಾದ ಸನ್ಮಾನ್ಯ ಶ್ರೀ ರುದ್ರಪ್ಪ ಲಮಾಣಿ ಮತ್ತು ವಿಧಾನ ಸಭಾ ಸದಸ್ಯರುಗಳಾದÀ ಸನ್ಮಾನ್ಯ ಶ್ರೀ ಸುರೇಶಕುಮಾರ, ಎ.ಮಂಜು, ಪ್ರಿಯಾಕೃಷ್ಣಾ, ಎಸ್.ಮುನಿರಾಜು, ಎಸ್.ಟಿ. ಸೋಮಶೇಖರ, ಸಿ.ಎನ್.ಬಾಲಕೃಷ್ಣ, ಡಾ|| ಅವಿನಾಶ ಜಾದವ, ಹೆಚ್.ಡಿ.ತಮ್ಮಯ್ಯ, ಶ್ರೀ ಮಹೇಶ ಟೆಂಗಿನಕಾಯಿ, ಆನಂದ ಕೆ.ಎಸ್., ಮತ್ತು ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯಪ್ರಭು ಜೆ.ಆರ್.ಜೆ, ಆಯ್.ಎ.ಎಸ್. ಅಧಿಕಾರಿಯಾದ ಪ್ರಭುಲಿಂಗ ಕವಳಿಕಟ್ಟಿ, ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷಕುಮಾರ ಬಿರಾದಾರ ಇವರುಗಳು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಡಾ|| ಗೋವಿಂದ ಮಣ್ಣೂರು, ಶ್ರೀ ಉದಯಕುಮಾರ ಡಿ.ನಾಯ್ಕ ಮತ್ತು ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀಮಠದಲ್ಲಿ ಗೋಪಾಳಕಾಳ ನಿಮಿತ್ಯ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-30.10.2025 ರಿಂದ 05.11.2025 ರವರೆಗೆ ಭಾಗವತ ಸಪ್ತಾಹ ಕಾರ್ಯಕ್ರಮ ನೆರವೇರಿತು, ದಿನಾಂಕ:-05.11.2025 ರಂದು ಸಾಯಂಕಾಲ 07-30 ಘಂಟೆಗೆ ಗೋಪಾಳಕಾಳ ನಿಮಿತ್ಯ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ನೆರವೇರಿಸಿದರು. ಶ್ರೀಮಠದ ಸಂಸ್ಕೃತ ಪಾಠಶಾಲೆಯಲ್ಲಿ ಭಾಗವತ್ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಪ್ರತಿ ನಿತ್ಯ ಮುಂಜಾನೆ 9-00 ಘಂಟೆಯಿAದ 12-00 ಘಂಟೆಯವರೆಗೆ ಹಾಗೂ ಮದ್ಯಾಹ್ನ 3-00 ಘಂಟೆಯಿಂದ 05-00 ಘಂಟೆಯವರೆಗೆ ಭಾಗವತ ಶಾಸ್ತçವನ್ನು ನಡೆಸಿಕೊಟ್ಟ ಶ್ರೀ ಶಿವಾನಂದ ಜೋಶಿಯವರು ಹಾಗೂ ದಾಸೋಹ ಸೇವೆ ನೆರವೇರಿಸಿದ ಶ್ರೀಮತಿ ನೀಲಮ್ಮ ಗೌಳಿ ಮತ್ತು ಡಂಬರಮತ್ತೂರ ಗ್ರಾಮದ ದಾನಿಗಳನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ಸಿಬ್ಬಂದಿವರ್ಗದವರು ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು.

ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-04.11.2025 ರಂದು ಹುಬ್ಬಳ್ಳಿ ಶಹರದ ಬಣಜಿಗ ಸಮಾಜದ ನೂತನ ಪದಾಧಿಕಾರಿಗಳಾದ ಶ್ರೀ ಚನ್ನಬಸಪ್ಪ ಧಾರವಾಡಶೆಟ್ರು, ಶ್ರೀ ಬಸವರಾಜ ಶೀಲವಂತರ, ಶ್ರೀ ವೀರಣ್ಣ ಮಳಗಿ, ಶ್ರೀ ಗುರುಪಾದಪ್ಪ ಶಿರೂರ, ಶ್ರೀ ಫಕ್ಕೀರಪ್ಪ ಅಕ್ಕಿ, ಶ್ರೀ ಸಂದೀಪ ಕುಂಬಿ, ಶ್ರೀ ರವಿ ಹುಬ್ಬಳ್ಳಿ, ಶ್ರೀ ಬಸವರಾಜ ಸೋಮನಕಟ್ಟಿ, ಶ್ರೀ ಬಸವರಾಜ ಟೋಂಗಳಿ, ಶ್ರೀ ಗುರುಸಿದ್ದಪ್ಪ ಅಂಗಡಿ, ಶ್ರೀ ನಿತೀನಕುಮಾರ ನಾಸಿ ಇವರುಗಳು ಶ್ರೀಮಠಕ್ಕೆ ಆಗಮಿಸಿ ಉಭಯ ಶ್ರೀಗಳವರ ದರ್ಶನಾಶೀರ್ವಾದವನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ಹೆಸ್ಕಾಂ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಜ್ಜಂಪೀರ ಖಾದ್ರಿ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-04.11.2025 ರಂದು ಹುಬ್ಬಳ್ಳಿ ವಿದ್ಯುತ್ ಪ್ರಸರಣಾ ನಿಗಮ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಜ್ಜಂಪೀರ ಖಾದ್ರಿ ಇವರು ಶ್ರೀಮಠಕ್ಕೆ ಭೆಟ್ಟಿ ಕೊಟ್ಟು ಉಭಯ ಶ್ರೀಗಳವರ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಗಣ್ಯರನ್ನು ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಧರ್ಮದರ್ಶಿಗಳಾದ ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀದಿ ನಾಟಕ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-01.11.2025 ರಂದು ಶ್ರೀಮಠದ ಆವರಣದಲ್ಲಿ ಸ್ವಚ್ಚತೆ, ಶೌಚಾಲಯ, ಹೆಣ್ಣುಮಕ್ಕಳ ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ಅಸ್ಪುರ್ಶತೆ ನಿವಾರಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಿರೇಮಠ ಕಲಾ ಬಳಗದಿಂದ ಬೀದಿ ನಾಟಕದ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಕಲಾವಿದರಿಗೆ ಶ್ರೀಮಠದ ವತಿಯಿಂದ ಶಾಲು ಹೊದಿಸಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ವೈಸ್-ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡಕೆ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-25.10.2025 ರಂದು ಸಾಯಂಕಾಲ:-06-30 ಗಂಟೆಗೆ ಶ್ರೀಮಠದ ಕೈಲಾಸ ಮಂಟಪದಲ್ಲಿ ವಿಧೂಷಿ ಶ್ರೀಮತಿ ರೇಖಾ ಹೆಗಡೆ. ಖ್ಯಾತ ಹಿಂದುಸ್ತಾನಿ ಗಾಯಕರು ಹಾಗೂ ಕು|| ಚಿತ್ರಲೇಖಾ. ಖ್ಯಾತ ಕೊಳಲು ವಾದಕಿ ಇವರಿಂದ ಸಂಗೀತಸAಜೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದ ಡಾ|| ಅರ್.ಎನ್. ಜೋಷಿ ಇವರು ಉದ್ಘಾಟಿಸಿದರು, ಪರಮಪೂಜ್ಯ ಶ್ರೀ ಶಾಂತಾನAದ ಮಹಾಸ್ವಾಮಿಗಳು. ಹುಬ್ಬಳ್ಳಿ ಇವರು ಸಾನಿಧ್ಯವನ್ನು ವಹಿಸಿದ್ದರು, ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಮಂಜುನಾಥ ಎಸ್. ಮುನವಳ್ಳಿ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಮಹಾಸ್ವಾಮಿಯವರ ಮಠದಲ್ಲಿ ಗೋವುಗಳ ಪೂಜೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-22.10.2025 ರಂದು ದೀಪಾವಳಿ ಪಾಡ್ಯದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀಮಠದ ಗೋಕೇಂದ್ರದಲ್ಲಿರುವ ಗೋವುಗಳ ಪೂಜೆಯನ್ನು ನೆರವೇರಿಸಲಾಯಿತು. ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀಮಠದ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಉದಯಕುಮಾರ ಡಿ. ನಾಯ್ಕ ಹಾಗೂ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಭಕ್ತರು ಉಪಸ್ಥಿತರಿದ್ದರು




  VIEW ALL