ಜಗದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳವರ ಜ್ಯೋತಿ ರಥ ಯಾತ್ರೆ ಉದ್ಘಾಟನಾ ಸಮಾರಂಭ
Date : 23-12-2024
ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190 ನೇ ಜಯಂತ್ಯುತ್ಸವ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ಯ ಆರೂಢ ಜ್ಯೋತಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಜ್ಯೋತಿ ಯಾತ್ರೆಯು ದಿನಾಂಕ:-23.12.2024 ರಂದು ಶ್ರೀ ಸಿದ್ಧಾರೂಢರ ಜನ್ಮ ಸ್ಥಳವಾದ ಚಳಕಾಪೂರ ಬೀದರ ಜಿಲ್ಲೆಯಿಂದ ಹೊರಟು ಕರ್ನಾಟಕ, ಆಂದ್ರ, ಮಹಾರಾಷ್ಟç ಹಾಗೂ ಗೋವಾ ರಾಜ್ಯಗಳ ವಿವಿಧ ಮಠ ಹಾಗೂ ವಿವಿಧ ಸ್ಥಳಗಳಲ್ಲಿ ಸಂಚರಿಸಿ ದಿನಾಂಕ:-18.02.2025 ರಂದು ಶ್ರೀ ಸಿದ್ಧಾರೂಢ ಮಠ ಹುಬ್ಬಳ್ಳಿಗೆ ಬಂದು ತಲುಪಲಿದೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸುವ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢರ ತತ್ವಗಳ ಭಜನೆ ಹಾಗೂ ಪ್ರವಚನಗಳ ಮೂಲಕ ಜ್ಞಾನದ ಪ್ರಸಾರ ಮತ್ತು ವಿಶ್ವಶಾಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ಮಾಡುತ್ತಿರುವುದು.