Shri Siddharoodha Swamiji Math Trust Committee

Hubballi

www.srisiddharoodhaswamiji.in

ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ನಡೆದ ಲಕ್ಷ ದೀಪೋತ್ಸವ
Date : 20-11-2025
ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಿನಾಂಕ: 20.11.2025 ರಂದು ಸಾಯಂಕಾಲ 06-30 ಘಂಟೆಗೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು, ಧಾರವಾಡ ಜಿಲ್ಲಾ, ಧಾರವಾಡದ ಸನ್ಮಾನ್ಯ ಶ್ರೀಮತಿ ಬಿ.ಎಸ್.ಭಾರತಿ ಹಾಗೂ ಇವರ ಪತಿಯಾದ ಶ್ರೀ ರಾಜಶೇಖರ, ಧಾರವಾಡ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ವೀಣಾ ನಾಯಕ, ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಈ ಮಹತ್ವಪೂರ್ಣ ಕಾರ್ಯಕ್ರಮದಲ್ಲ್ಲಿ ಭಾಗವಹಿಸಿದವರೆಲ್ಲರಿಗೂ ಶುಭಮಂಗಲವಾಗಲೆAದು ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಚೇರಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ವಹಿಸಿದ್ದರು, ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ ಇವರು ಎಲ್ಲರನ್ನು ಸ್ವಾಗತಿಸಿದರು, ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಪ್ರಾರ್ಥನೆಯನ್ನು ಶ್ರೀ ಸದಾನಂದ ಬೆಂಡಿಗೇರಿ ಇವರು ನೆರವೇರಿಸಿದರು. . ಈ ಸಂದರ್ಭದಲ್ಲಿ ವೈಸ್ ಚೇರ್‌ಮನ್ನರಾದ ಶ್ರೀ ವಿನಾಯಕ ಅ. ಘೋಡ್ಕೆ, ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಎಸ್. ಬೆಳಗಾವಿ, ಧರ್ಮದರ್ಶಿಗಳಾದ ಶ್ರೀ ಮಂಜುನಾಥ ಎಸ್. ಮುನವಳ್ಳಿ, ಶ್ರೀ ವಿ.ವಿ.ಮಲ್ಲಾಪೂರ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ಕೆ.ಎಲ್.ಪಾಟೀಲ, ಶ್ರೀ ವಿ.ಡಿ.ಕಾಮರಡ್ಡಿ, ಶ್ರೀ ಸಿದ್ದನಗೌಡ ಪಿ. ಪಾಟೀಲ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಶ್ರೀ ವಸಂತ ವಾಯ್. ಸಾಲಗಟ್ಟಿ, ಮಾಜಿ ಚೇರ್‌ಮನ್ನರಾದ ಶ್ರೀ ಮಹೇಂದ್ರ ಸಿಂಘಿ, ಮಾಜಿ ಗೌರವ ಕಾರ್ಯದರ್ಶಿಗಳಾದ ಶ್ರೀ ರಂಗಾ ಬದ್ದಿ, ಶ್ರೀ ಎಸ್.ಆಯ್.ಕೋಳಕೂರ, ಮಾಜಿ ಧರ್ಮದರ್ಶಿಗಳಾದ ಶ್ರೀ ಮಹೇಶ ಹನಗೋಡಿ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ದೀಪಾ ಗೌರಿ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ಸಿಬ್ಬಂದಿವರ್ಗದವರು ಮತ್ತು ಅನೇಕ ಭಕ್ತರು ಉಪಸ್ಥಿತರಿದ್ದರು. ದೀಪೋತ್ಸವದಲ್ಲಿ ಅತೀ ಹೆಚ್ಚು ಉತ್ಸುಕತೆಯಿಂದ ಸೇವೆ ಸಲ್ಲಿಸಿದ ಭಕ್ತರಿಗೆ, ಸೇವಕರಿಗೆ, ಪಾಠಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.