ಬಣಜಿಗ ಸಮಾಜದ ನೂತನ ಪದಾಧಿಕಾರಿಗಳ ಭೆಟ್ಟಿ
Date : 04-11-2025
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ದಿನಾಂಕ:-04.11.2025 ರಂದು ಹುಬ್ಬಳ್ಳಿ ಶಹರದ ಬಣಜಿಗ ಸಮಾಜದ ನೂತನ ಪದಾಧಿಕಾರಿಗಳಾದ ಶ್ರೀ ಚನ್ನಬಸಪ್ಪ ಧಾರವಾಡಶೆಟ್ರು, ಶ್ರೀ ಬಸವರಾಜ ಶೀಲವಂತರ, ಶ್ರೀ ವೀರಣ್ಣ ಮಳಗಿ, ಶ್ರೀ ಗುರುಪಾದಪ್ಪ ಶಿರೂರ, ಶ್ರೀ ಫಕ್ಕೀರಪ್ಪ ಅಕ್ಕಿ, ಶ್ರೀ ಸಂದೀಪ ಕುಂಬಿ, ಶ್ರೀ ರವಿ ಹುಬ್ಬಳ್ಳಿ, ಶ್ರೀ ಬಸವರಾಜ ಸೋಮನಕಟ್ಟಿ, ಶ್ರೀ ಬಸವರಾಜ ಟೋಂಗಳಿ, ಶ್ರೀ ಗುರುಸಿದ್ದಪ್ಪ ಅಂಗಡಿ, ಶ್ರೀ ನಿತೀನಕುಮಾರ ನಾಸಿ ಇವರುಗಳು ಶ್ರೀಮಠಕ್ಕೆ ಆಗಮಿಸಿ ಉಭಯ ಶ್ರೀಗಳವರ ದರ್ಶನಾಶೀರ್ವಾದವನ್ನು ಪಡೆದುಕೊಂಡರು ಈ ಸಂದರ್ಭದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ ಕಮೀಟಿಯ ಚೇರ್‌ಮನ್ನರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು