Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

Daily News
2024 ನೇ ವರ್ಷದ ಶ್ರಾವಣ ಜಲರಥೋತ್ಸವ

ಶ್ರಾವಣ ಮಹೋತ್ಸವವು ಶ್ರೀ ಶಾಲಿವಾಹನ ಶಕೆ 1946 ಕ್ರೋಧಿನಾಮ ಸಂವತ್ಸರದ ಶ್ರಾವಣ ಶುದ್ಧ ದಶಮಿ ದಿನಾಂಕ:-14.08.2024 ರಂದು ಪ್ರಾತ:ಕಾಲಕ್ಕೆ ಶ್ರೀ ಸಿದ್ಧಾರೂಢಸ್ವಾಮಿಗಳವರ ಸಮಾಧಿಗೆ ರುದ್ರಾಭಿಷೇಕ ನೆರವೇರಿದ ನಂತರ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಯಿತು. ಪ್ರತಿನಿತ್ಯ ಮುಂಜಾನೆ ಶ್ರೀಮಠದ ಕೈಲಾಸ ಮಂಟಪದಲ್ಲಿ 7-45 ಘಂಟೆಗೆ ಶ್ರೀ ಸಿದ್ಧಾರೂಢಸ್ವಾಮಿಯವರ ಪುರಾಣ ಪಠಣ ಹಾಗೂ 09-30 ಘಂಟೆಗೆ ಪೂಜ್ಯ ಮಹಾತ್ಮರಿಂದ ಶಾಸ್ತ ಪ್ರವಚನ ಮತ್ತು ಸಾಯಂಕಾಲ 5-೦೦ ಘಂಟೆಗೆ ಕೀರ್ತನೆ ನಡೆದು ನಂತರ ಮಹಾಪೂಜೆ ನೆರವೇರಿಸಲಾಯಿತು. ಶ್ರಾವಣ ವದ್ಯ ಪ್ರತಿಪದ ಅಂದರೆ ದಿನಾಂಕ: 20.08.2024, ಮಂಗಳವಾರ ದಿವಸ ಶ್ರೀ ಸಿದ್ಧಾರೂಢ ಸ್ವಾಮಿಯವರ 95 ನೇ ವರ್ಷದ ಪುಣ್ಯತಿಥಿಯ ದಿವಸ ಪಲ್ಲಕ್ಕಿ ಉತ್ಸವವು ವಾದ್ಯ ವೈಭವದೊಂದಿಗೆ ಶಹರದೊಳಗೆ ಹೋಗಿ ಮರಳಿ ಶ್ರೀಮಠಕ್ಕೆ ಬಂದು ಸಾಯಂಕಾಲ: 5-30 ಘಂಟೆಗೆ ಜಲರಥೋತ್ಸವ (ತೆಪ್ಪದ ತೇರು) ಅತ್ಯಂತ ವಿಜೃಂಭಣೆಯಿ0ದ ಜರುಗಿತು, ನಂತರ ಮಹಾಪೂಜೆಯೊಂದಿಗೆ ಉತ್ಸವವು ಸಮಾಪ್ತಿಯಾಯಿತು.

ಶ್ರಾವಣ ಜಲರಥೋತ್ಸವ ಆಮಂತ್ರಣ.

15 ನೇ ವರ್ಷದ “ಭಗವಚ್ಚಿಂತನ ಸಾಧನ ಶಿಬಿರ”ದ ಸಮಾರೋಪ ಸಮಾರಂಭ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿಯವರ ಮಠದಲ್ಲಿ ದಿನಾಂಕ: 07.07.2024 ರಿಂದ 02.08.2024 ರವರೆಗೆ ನಡೆದ ಭಗವಚ್ಚಿಂತನ ಸಾಧನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೋ.ಬ್ರ ಸದ್ಗುರು ಸಹಜಯೋಗಿ ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ- ಮಹಾಲಿಂಗಪೂರ ಆಶೀರ್ವಚನವನ್ನು ನೀಡಿದರು, ಹುಬ್ಬಳ್ಳಿಯ ಶ್ರೀಮಠದಲ್ಲಿ ಸತತವಾಗಿ ಹದಿನಾರು ವರ್ಷಗಳ ಪರಿಯಂತರವಾಗಿ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿಕೊಂಡು ಬಂದಿದ್ದು ಅತ್ಯಂತ ಶ್ಲಾö್ಯಘನೀಯವಾದ ವಿಷಯವಾಗಿದೆ, ಏಕೆಂದರೆ ಇತ್ತೀಚಿನ ದಿನಮಾನಗಳಲ್ಲಿ ಬೇರೆ ಬೇರೆ ವಿಷಯಗಳ ಚಿಂತನೆ ಮಾಡುವ ಶಿಬಿರಗಳು ಸಾಕಷ್ಟು ನಡೆಯುತ್ತವೆ, ಆದರೆ ಸರ್ವ ಜೀವಿಗಳ ಆತ್ಮ ಸ್ವರೂಪಿಯಾದ ಭಗವಂತನ ಚಿಂತನೆ ನಡೆಯುವುದು ಅತೀ ವಿರಳ, ಇಂತಹದರಲ್ಲಿ ಶ್ರೀಮಠದಿಂದ ಹದಿನಾರು ವರ್ಷಗಳವರೆಗೆ ಭಗವಚ್ಚಿಂತನ ಸಾಧನ ಶಿಬಿರ ನಡೆಯಿಸಿ ಶಿಬಿರಾರ್ಥಿಗಳಿಗೆ ವಿಚಾರ ಸಾಗರ, ಪಾರಮಾರ್ಥಗೀತೆ, ಸಿದ್ಧಾರೂಢರ ಚರಿತ್ರೆ ಹಾಗೂ ಶ್ರೀಮನ್ ನಿಜಗುಣ ಸ್ವಾಮಿಗಳ ಶಾಸ್ತç ಮುಂತಾದ ಗ್ರಂಥಗಳನ್ನು ಅಧ್ಯಯನ ಮಾಡಿಕೊಳ್ಳಲಿಕ್ಕೆ ಅನುಕೂಲ ಮಾಡಿಕೊಟ್ಟ ಶ್ರೀಮಠದ ಎಲ್ಲಾ ಧರ್ಮದರ್ಶಿಗಳಿಗೆ ಸಿದ್ಧಾರೂಢರ ಕೃಪಾಶೀರ್ವಾದ ಇರಲೆಂದು ಹೃದಯ ತುಂಬಿ ಹಾರೈಸಿದರು. ನೇತೃತ್ವವನ್ನು ಶ್ರೋ.ಬ್ರ. ಸದ್ಗುರು ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ, ರನ್ನತಿಮ್ಮಾಪೂರ ಹಾಗೂ ಸಮ್ಮುಖ ಸ್ಥಾನವನ್ನು ಶ್ರೋ.ಬ್ರ. ಸದ್ಗುರು ಯೋಗಿರಾಜ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಹಾಗೂ ಮಾತೋಶ್ರೀ ಶಶಿಕಲಾ ಮಾತಾ ಇವರುಗಳು ವಹಿಸಿದ್ದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮಠದ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಕಲ್ಯಾಣ ಶೆಟ್ಟರ ಇವರು ವಹಿಸಿದ್ದರು. ಧರ್ಮದರ್ಶಿಗಳಾದ ಶ್ರೀ ಉದಯಕುಮಾರ ಡಿ. ನಾಯ್ಕ ಇವರು ಎಲ್ಲ ಪೂಜ್ಯರನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು. ಧರ್ಮದರ್ಶಿಗಳಾದ ಶ್ರೀಮತಿ ಗೀತಾ ಟಿ. ಕಲಬುರ್ಗಿ ಇವರು ಸರ್ವವರನ್ನು ವಂದಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀ ರಮೇಶ ಎಸ್. ಬೆಳಗಾವಿ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಉಪಸ್ಥಿತರಿದ್ದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಗುರುಪೂರ್ಣಿಮೆ ಆಚರಣೆ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಇದೇ ದಿನಾಂಕ: 21.07.2024 ರಂದು ಗುರುಪೂರ್ಣಿಮೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ 6-೦೦ ಘಂಟೆಗೆ ಕಾಕಡಾರತಿ ಪೂಜೆ, 12-3೦ ಘಂಟೆಗೆ ಅನ್ನ ಸಂತರ್ಪಣೆ, ಮುಂಜಾನೆ:-೦7-೦೦ ರಿಂದ 12-3೦ ರ ವರೆಗೆ ಅಭಿಷೇಕ, ಸಾಯಂಕಾಲ : ೦7-೦೦ ಘಂಟೆಗೆ ಶ್ರೀಗಳವರ ಮಂದಿರದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಿತು, ಗುರುವಂದನಾ ಸಮಾರಂಭದ ಸಾನಿಧ್ಯವನ್ನು ಪರಮಪೂಜ್ಯಶ್ರೀ ಸಹಜಾನಂದ ಸ್ವಾಮಿಗಳು ಪೀಠಾಧ್ಯಕ್ಷರು ಸಿದ್ಧಾರೂಢ ದರ್ಶನಪೀಠ, ಚಿಕ್ಕನಂದಿ ಹಾಗೂ ಮಹಾಲಿಂಗಪೂರ ಇವರು ವಹಿಸಿದ್ದರು. ನೇತೃತ್ವವನ್ನು ಪರಮ ಪೂಜ್ಯ ಶ್ರೀ ಬಸವರಾಜ ಸ್ವಾಮಿಗಳು, ಶಿವಾನಂದ ಮಠ, ರನ್ನ ಬೆಳಗಲಿ ಇವರು ವಹಿಸಿದ್ದರು. ಪರಮ ಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ, ಪರಮ ಪೂಜ್ಯ ಶ್ರೀ ಪರಿಪೂರ್ಣಾನಂದ ಸ್ವಾಮಿಗಳು, ಬೆಳಹೊಡ, ಪರಮ ಪೂಜ್ಯ ಶ್ರೀ ಆತ್ಮಾನಂದ ಸ್ವಾಮಿಗಳು, ಗೋಕಾಕ, ಪರಮ ಪೂಜ್ಯ ಶ್ರೀ ಶಾಂತಾನAದ ಸ್ವಾಮಿಗಳು, ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ ಇವರುಗಳು ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಚೇರಮನ್ನರು, ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಇವರು ವಹಿಸಿದ್ದರು. ಪೂಜ್ಯ ಮಹಾತ್ಮರಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಾ. ಪೂಜೇರಿ, ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಧರ್ಮದರ್ಶಿಗಳಾದ ಡಾ|| ಗೋವಿಂದ ಜಿ. ಮಣ್ಣೂರ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಕೋಟಿ ಬಿಲ್ವಾರ್ಚನೆ & 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ದಿನಾಂಕ:-07.07.2024 ರಿಂದ 15.09.2024 ರವರೆಗೆ ನಡೆಯುವ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ ಹಾಗೂ ದಿನಾಂಕ: 07.07.2024 ರಿಂದ 03.08.2024 ರವರೆಗೆ ನಡೆಯುವ 16ನೇ ವರ್ಷದ ಭಗವಚ್ಚಿಂತನ ಸಾಧನ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಗೋಕಾಕದ ಶ್ರೀ ಶಾಮಾನಂದ ಆಶ್ರಮದ ಸದ್ಗುರು ಶ್ರೀ ಅತ್ಯಾನಂದ ಮಹಾಸ್ವಾಮಿಗಳು, ಪಾವನ ಸಾನಿದ್ಯವನ್ನು ವಹಿಸಿದ್ದ ಸಹಜಯೋಗಿ ಶ್ರೋ.ಬ್ರ.ಸದ್ಗುರು ಶ್ರೀ ಸಹಜಾನಂದ ಮಹಾಸ್ವಾಮಿಗಳು, ಪೀಠಾಧ್ಯಕ್ಷರು, ಶ್ರೀ ಸಿದ್ಧಾರೂಢರ ದರ್ಶನ ಪೀಠ, ಚಿಕ್ಕನಂದಿ, ಸಾನಿದ್ಯ ವಹಿಸಿದ ಅಣ್ಣಿಗೇರಿ ದಾಸೋಹ ಮಠದ ಪೀಠಾಧೀಶರಾದ ಪರಮ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಮ್ಮುಖ ಸ್ಥಾನವನ್ನು ಪರಮ ಪೂಜ್ಯ ಶ್ರೀ ಬಸವರಾಜ ಮಹಾಸ್ವಾಮಿಗಳು, ಶಿವಾನಂದ ಆಶ್ರಮ ರನ್ನತಿಮ್ಮಾಪೂರ, ಪರಮ ಪೂಜ್ಯ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಗೋಕಾಕ, ಪರಮಪೂಜ್ಯ ಶ್ರೀ ಸದಾಶಿವ ಗುರೂಜಿ, ರನ್ನಬೆಳಗಲಿ ಇವರುಗಳು ವಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ಇವರು ವಹಿಸಿದ್ದರು, ಭಗವಚ್ಚಿಂತನ ಸಾಧನ ಶಿಬಿರದ ಸಂಚಾಲಕರು ಹಾಗೂ ಶ್ರೀಮಠದ ಧರ್ಮದರ್ಶಿಗಳಾದ ಶ್ರೀ ಶಾಮಾನಂದ ಬಿ. ಪೂಜೇರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು, ಕೋಟಿ ಬಿಲ್ವಾರ್ಚನೆಯ ಅದ್ಯಕ್ಷರಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ ಇವರು ಉಪಸ್ಥಿತ ವಹಿಸಿದ್ದರು, ಪ್ರಾರ್ಥನೆಯನ್ನು ಶ್ರೀ ಮಲ್ಲನಗೌಡ ಶೆಗುಣಸಿ, ಸಾ|| ಗೋಕಾಕ ಇವರು ನೆರವೇರಿಸಿದರು, ಮಾಜಿ ಧರ್ಮದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ವೈಸ್-ಚೇರ್‌ಮನ್ನರಾದ ಶ್ರೀ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಬಾಳು ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿ.ವಿ.ಮಲ್ಲಾಪೂರ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀ ಸಿದ್ಧನಗೌಡ ಪಿ. ಪಾಟೀಲ, ಶ್ರೀ ಉದಯಕುಮಾರ ಡಿ. ನಾಯ್ಕ, ಶ್ರೀಮತಿ ಗೀತಾ ಕಲಬುರ್ಗಿ ಹಾಗೂ ಶ್ರೀಮಠದ ಮ್ಯಾನೇಜರ ಶ್ರೀ ಈರಣ್ಣ ತುಪ್ಪದ ಹಾಗೂ ನೂರಾರು ಜನ ಸಾಧಕರು ಮತ್ತು ಪೂಜಾರ್ಥಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ, ಹುಬ್ಬಳ್ಳಿ ಮತ್ತು ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆ, ನವದೆಹಲಿ ಇವರ ಸಹಯೋಗದಲಿಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮ

ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮವು ದಿನಾಂಕ:-01.07.2024 ರಿಂದ 15.09.2024 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಮುಂಜಾನೆ:-09-00 ಘಂಟೆಗೆ ಪ್ರಾರಂಭ.

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ

ಶ್ರೀ ಸಿದ್ಧಾರೂಢ ಮಹಾಸ್ವಾಮಿಜಿಯವರ ಅಂಚೆ ಚೀಟಿ ಬಿಡುಗಡೆ ಸಮಾರಂಭ. ದಿ: 06.07.2024 ರ ಶನಿವಾರ ಸಾಯಂಕಾಲ:- ೦6-೦೦ ಘಂಟೆಗೆ




  VIEW ALL