Shri Siddharoodha Swamiji Math Trust Committee

Hubballi

www.srisiddharoodhaswamiji.in

Events Of Current Months

ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
Date:-17.04.2024 ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ
ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ
Date:-09.04.2024 ಯುಗಾದಿ ಪ್ರತಿಪದ, ಶ್ರೀ ಸಿದ್ಧಾರೂಢಸ್ವಾಮಿಗಳ ಜನ್ಮೋತ್ಸವ ನಿಮಿತ್ಯ ಸಪ್ತಾಹ ಆರಂಭ

Daily News
ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳವರ 188ನೇ ಜನ್ಮೋತ್ಸವವನ್ನು ದಿನಾಂಕ: 09-04-2024 ರಿಂದ 17-04-2024 ರವರೆಗೆ ಆಚರಿಸಲಾಗುತ್ತಿದ್ದು. ಈ ಕಾರ್ಯಕ್ರಮದ ಅಂಗವಾಗಿ ದಿನಾಂಕ: 17-04-2024 ರಂದು ಮಧ್ಯಾಹ್ನ 12 ಘಂಟೆಗೆ ಶ್ರೀಗಳವರ ಪಾಲಕಿಯು ವಾದ್ಯ ಮೇಳಗಳೊಂದಿಗೆ ನಗರದಲ್ಲಿ ಸಂಚರಿಸಿ ಸಾಯಂಕಾಲ 5 ಘಂಟೆಗೆ ಆರತಿ ಹಾಗೂ ಕುಂಬ ಹೊತ್ತ ಮಹಿಳೆಯರು ಸ್ವಾಗತಿಸಿಕೊಂಡ ನಂತರ ಶ್ರೀಮಠಕ್ಕೆ ತಲುಪುವುದು ನಂತರ ಶ್ರೀಗಳವರ ತೊಟ್ಟಿಲೋತ್ಸವ ನಡೆಯುವುದು. ಈ ಎಲ್ಲಾ ಕಾರ್ಯಕ್ರಮಗಳ ಪ್ರಯೋಜನವನ್ನು ಭಕ್ತಾದಿಗಳು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರುತ್ತೇವೆ.

Tender Notification..

Proposed construction of Road, drain and service

ರಮ್‌ಜಾನ್ ಹಬ್ಬದ ನಿಮಿತ್ಯ ಮುಸ್ಲಿಂ ಬಾಂಧವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-೧೧-೦೪-೨೦೨೪ ರಂದು ರಮ್‌ಜಾನ್ ಹಬ್ಬದ ನಿಮಿತ್ಯವಾಗಿ ಮುಸ್ಲಿಂ ಬಾಂಧವರಾದ ಡಾ|| ಬಿಜಾಪೂರ, ಶ್ರೀ ಶಿರಾಜ್‌ಅಹಮದ್ ಖುರ್ಚಿವಾಲೆ, ಶ್ರೀ ಎಜಾಜ್ ಜಾಗೀರದಾರ ಹಾಗೂ ಇತರರು ಶ್ರೀಮಠಕ್ಕೆ ಆಗಮಿಸಿ ಉಭಯ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿ ವತಿಯಿಂದ ರಮ್‌ಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ಶಾಮಾನಂದ ಬಾ. ಪೂಜೇರಿ, ಶ್ರೀ ಅಂದಾನಪ್ಪ ಸಿ. ಚಾಕಲಬ್ಬಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಜಿ.ಎಸ್.ನಾಯ್ಕ, ಭಕ್ತರಾದ ಶ್ರೀ ಶಾಂತರಾಜ ಪೋಳ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಎಸ್. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಉಮೇಶ ಅಡಿಗ ಇವರ ಭೆಟ್ಟಿ

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠಕ್ಕೆ ದಿನಾಂಕ:-09.04.2024 ರಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಉಮೇಶ ಅಡಿಗ ಹಾಗೂ ಇವರ ಜೊತೆಗೆ ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸನ್ಮಾನ್ಯ ಶ್ರೀ ಎ.ಎಸ್.ಬೆಳ್ಳೂಂಕಿ ಇವರು ಶ್ರೀಮಠಕ್ಕೆ ಆಗಮಿಸಿ ಉಭಯ ಶ್ರೀಗಳವರ ಗದ್ದುಗೆಗಳ ದರ್ಶನಾಶೀರ್ವಾದವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳನ್ನು ಶ್ರೀಮಠದ ವತಿಯಿಂದÀ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಠದ ವೈಸ್-ಚೇರ್‌ಮನ್ನರಾದ ಶ್ರೀ ಉದಯಕುಮಾರ ಡಿ. ನಾಯ್ಕ, ಧರ್ಮದರ್ಶಿಗಳಾದ ಶ್ರೀ ಚೆನ್ನವೀರ ಡಿ. ಮುಂಗುರವಾಡಿ, ಡಾ|| ಗೋವಿಂದ ಗು. ಮಣ್ಣೂರ, ಶ್ರೀ ವಿನಾಯಕ ಅ. ಘೋಡ್ಕೆ ಹಾಗೂ ಶ್ರೀಮಠದ ಮ್ಯಾನೇಜರ್ ಶ್ರೀ ಈರಣ್ಣ ಎಸ್. ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತರು ಉಪಸ್ಥಿತರಿದ್ದರು.

ಒಂಭತ್ತನೇಯ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢಸ್ವಾಮಿಯವರ 188 ನೇ ಜಯಂತ್ಯೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಒಂಭತ್ತನೇಯ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆಯನ್ನು ದಿನಾಂಕ:-10.04.2024 ರಂದು ಮುಂಜಾನೆ :- 10-00 ಘಂಟೆಗೆ ಉದ್ಘಾಟನಾ ಸಮಾರಂಭವು ಜರುಗಿತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಅಧ್ಯಕ್ಷರಾದ ಶ್ರೀ ಶಾಮಾನಂದ ಪೂಜೇರಿಯವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರುಅಧ್ಯಕ್ಷತೆಯನ್ನು ಶ್ರೀಮಠದ ಚೇರ್‌ಮನ್ನರಾದ ಶ್ರೀ ಬಸವರಾಜ ಸಿ. ಕಲ್ಯಾಣಶೆಟ್ಟರ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಶ್ರೀ ಚನ್ನವೀರ ಡಿ. ಮುಂಗುರವಾಡಿ, ಶ್ರೀ ಬಾಳು ಟಿ. ಮಗಜಿಕೊಂಡಿ, ಶ್ರೀ ರಮೇಶ ಎಸ್. ಬೆಳಗಾವಿ, ಶ್ರೀ ವಿನಾಯಕ ಅ. ಘೋಡ್ಕೆ, ಶ್ರೀಮತಿ ಗೀತಾ ಟಿ. ಕಲಬುರ್ಗಿ ಉಪಸ್ಥಿತರಿದ್ದರು, ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್.ಆಯ್.ಕೋಳಕೂರ ಇವರು ಕಾರ್ಯಕ್ರಮ ನಿರೂಪಿಸಿದರು, ಶ್ರೀ ಮಠದ ಮ್ಯಾನೇಜರ್ ಈರಣ್ಣ ಸೋ. ತುಪ್ಪದ ಮತ್ತು ಸಿಬ್ಬಂದಿವರ್ಗದವರು ಹಾಗೂ ಭಕ್ತರು ಹಾಜರಿದ್ದರು.

ಪಂಚಲೋಹದ ನಾಗಾಭರಣ ದೇಣಿಗೆ

ದಿನಾಂಕ:-09.04.2024 ರಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಶ್ರೀಮತಿ ಎಚ್.ಬಿ.ಸರೋಜಮ್ಮ ಇವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲ್ವೇ ಸ್ಟೇಷನ್‌ನಲ್ಲಿರುವ ಶ್ರೀ ಸಿದ್ಧಾರೂಢ ಸ್ವಾಮಿಯವರ ಮೂರ್ತಿಗೆ ಅಲಂಕಾರ ಮಾಡಲಿಕ್ಕೆ ಪಂಚಲೋಹದ ನಾಗಾಭರಣವನ್ನು ದೇಣಿಗೆಯಾಗಿ ನೀಡಿರುತ್ತಾರೆ. ದಾನಿಗಳಿಗೆ ಶ್ರೀಮಠದ ಟ್ರಸ್ಟ್ ಕಮೀಟಿ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಮಠದ ಚೇರಮನ್ನರಾದ ಶ್ರೀ ಬಸವರಾಜ ಕಲ್ಯಾಣಶೆಟ್ಟರ, ಧರ್ಮದರ್ಶಿಗಳಾದ ಡಾ|| ಗೋವಿಂದ ಗು. ಮಣ್ಣೂರ, ಶ್ರೀಮತಿ ಗೀತಾ ಕಲಬುರ್ಗಿ, ಮಾಜಿ ಧರ್ಮದರ್ಶಿಗಳಾದ ಶ್ರೀ ಜಗದೀಶ ಲ. ಮಗಜಿಕೊಂಡಿ, ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಆಯ್.ಜಿ.ಸನದಿ ಹಾಗೂ ಭಕ್ತವೃಂದದವರು ಹಾಜರಿದ್ದರು.

🌷🙏 ಕೌದಿ ಪೂಜಾ ಮಹತ್ವ 🙏🌷

ಅದ್ವೈತ ಸಾರ್ವಭೌಮ ಚಕ್ರವರ್ತಿ, ಸ್ಥಿತಪ್ರಜ್ಞ, ನಿರಾಭಾರಿ ನಿರ್ಗುಣ ಬ್ರಹ್ಮ, ದೇಶ ಕಂಡ ಶ್ರೇಷ್ಠ ಸಂತ, ಸದ್ಗುರು ಸಿದ್ಧಾರೂಢ ಮಹಾಸ್ವಾಮಿಗಳು ಕೇವಲ ಕೌಪಿನ ಧಾರಣೆಯಾಗಿ ಇಡೀ ದೇಶವನ್ನೇ ಕಾಲ್ನಡಿಗೆಯಲ್ಲಿ ಸಂಚರಿಸಿದ ಮಹಾಯೋಗಿ, ಎಷ್ಟೋ ದಿನಗಳ ವರೆಗೆ ಅನ್ನ ನೀರು ತ್ಯಜಿಸಿ ತಪಸ್ಸನ್ನು ಮಾಡಿದ ಮಹಾನ್ ತಪಸ್ವಿ, ಕೊನೆಗೆ ಹುಬ್ಬಳ್ಳಿಯಲ್ಲಿ ನೆಲೆಸಿ ಭಕ್ತರು ದಾನಿಗಳು ಕೊಟ್ಟಂತ ಬಂಗಾರ ವಜ್ರ ವೈಡೂರ್ಯಗಳ ಅಲಂಕಾರದಿಂದ ಪೂಜೆ ಗೈದರು ಹಿಗ್ಗದೆ ತಲೆಯ ಮೇಲೆ ಬೆಂಕಿಯನಿಟ್ಟರು ಕುಗ್ಗದೆ ಸದಾ ಸ್ಥಿತಿಪ್ರಜ್ಞ ಸ್ಥಿತಿಯಲ್ಲಿ ಸರ್ವ ಭಕ್ತರನ್ನು ಉದ್ದರಿಸಿದ ಮಹಾನ್ ಯೋಗಿ. ನಿಜವಾದ ಸಾಧು ಸತ್ಪುರುಷರ ನಿಜ ಸ್ವರೂಪ ಮತ್ತು ವೈರಾಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ & ಸದ್ಗುರುಗಳ ಇಚ್ಚೆಯಂತೆ ವರ್ಷದಲ್ಲಿ ಒಂದು ದಿನ " ಕೌದಿ ಪೂಜೆ "ಯನ್ನು ಆಚರಣೆಗೆ ತರಲಾಯಿತು.... ಓಂ ನಮಃ ಶಿವಾಯ 🌷🙏🌷

2024 ನೇ ವರ್ಷದ ಶಿವರಾತ್ರಿ ಮಹೋತ್ಸವಕ್ಕೆ ಮಾನ್ಯ ಮುಖ್ಯ ಆಡಳಿತಾಧಿಕಾರಿಗಳು, ಶ್ರೀ ಸಿದ್ಧಾರೂಢಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಹಾಗೂ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಧಾರವಾಡ. & ಶ್ರೀ ಮಠದ ಧರ್ಮದರ್ಶಿಗಳು ಭಕ್ತವೃಂದಕ್ಕೆ ಮಾಡುವ ವಿನಯಪೂರ್ವಕ ವಿಜ್ಞಾಪನೆಗಳು

ಮಹಾಶಿವರಾತ್ರಿ ಮಹೋತ್ಸವವು ಇದೇ ಶೋಭಕೃತನಾಮ ಸಂವತ್ಸರ ಮಾಘ ವದ್ಯ ಸಪ್ತಮಿ ದಿನಾಂಕ: 03.03.2024 ರವಿವಾರದಂದು ಸೂರ್ಯೋದಯಕ್ಕೆ ಶಿವನಾಮ ಸಪ್ತಾಹದೊಂದಿಗೆ ಪ್ರಾರಂಭವಾಗುವುದು. ಪ್ರತಿನಿತ್ಯ ಬೆಳಿಗ್ಗೆ 07-45 ಘಂಟೆಗೆ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, ಮುಂಜಾನೆ 09-00 ಘಂಟೆಗೆ ಮಹಾತ್ಮರಿಂದ, ಪಂಡಿತರಿ0ದ ವೇದಾಂತ ಉಪನ್ಯಾಸಗಳು ನಡೆಯುವವು. ಸಾಯಂಕಾಲ 05-00 ಘಂಟೆಗೆ ಕೀರ್ತನೆ ನಡೆದು ಮಹಾಪೂಜೆ ನಡೆಯುವುದು. ದಿನಾಂಕ: 08.03.2024 ರ ಮಾಘ ವದ್ಯ ತ್ರಯೋದಶಿ ಶುಕ್ರವಾರ ಮಹಾಶಿವರಾತ್ರಿ ಜಾಗರಣೆ ನಿಮಿತ್ಯ ಪಲ್ಲಕ್ಕಿ ಉತ್ಸವವು ಗಣೇಶಪೇಟೆಯಲ್ಲಿರುವ ಶ್ರೀ ಜಡಿಸ್ವಾಮಿ ಮಠಕ್ಕೆ ಹೋಗಿ ಮರಳಿ ಶ್ರೀಮಠಕ್ಕೆ ಬರುವುದು. ದಿನಾಂಕ 09.03.2024 ನೇ ಶನಿವಾರ ಪಲ್ಲಕ್ಕಿ ಉತ್ಸವ ನಂತರ ಸಾಯ0ಕಾಲ 05-30 ಘಂಟೆಗೆ ರಥೋತ್ಸವ ಜರುಗುವುದು. ದಿನಾಂಕ 10.03.2024 ರ ರವಿಮವಾರ ಶಿವರಾತ್ರಿ ಅಮವಾಸ್ಯೆ ಬೆಳಿಗ್ಗೆ 05-00 ರಿಂದ ೦6:೦೦ ಘಂಟೆ ವರೆಗೆ ಭಸ್ಮ ಸ್ನಾನ ನೆರವೇರುವುದು. ದಿನಾಂಕ 11.03.2024 ನೇ ಸೋಮವಾರ ಸಾಯಂಕಾಲ 6 ಘಂಟೆಗೆ ಕೌದಿ ಪೂಜೆಯೊಂದಿಗೆ ಉತ್ಸವವು ಸಮಾಪ್ತವಾಗುವದು. ಕಾರಣ ಸದ್ಭಕ್ತರು ಸಹ ಕುಟುಂಬ ಪರಿವಾರದೊಡನೆ ಬಂದು ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಯವರ ಮತ್ತು ಸದ್ಗುರು ಶ್ರೀ ಗುರುನಾಥಾರೂಢ ಸ್ವಾಮಿಯವರ ದರ್ಶನ ಆಶೀರ್ವಾದ ಪಡೆದು ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು ಮನ ಧನ ದಿಂದ ಸೇವೆ ಸಲ್ಲಿಸಿ, ಸದ್ಗುರು ಶ್ರೀ ಸಿದ್ಧಾರೂಢರ ಮತ್ತು ಸದ್ಗುರು ಶ್ರೀ ಗುರುನಾಥಾರೂಢರ ಕೃಪೆಗೆ ಪಾತ್ರರಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕಾಗಿ ವಿನಂತಿ.




  VIEW ALL